ವಿಕ್ರಾಂತ್ ರೋಣ. ಈ ವರ್ಷ ರಿಲೀಸ್ ಆಗಬೇಕಿರುವ ಬಹುಭಾಷಾ ಸಿನಿಮಾ. ಬಹುನಿರೀಕ್ಷಿತ ಸಿನಿಮಾ. ಕಿಚ್ಚ ಸುದೀಪ್ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ವಿಕ್ರಾಂತ್ ರೋಣ. ಜಾಕ್ ಮಂಜು ನಿರ್ಮಾಣದ ಸಿನಿಮಾ ಫೆಬ್ರವರಿ 24ರಂದು ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ಡೈರೆಕ್ಟ್ ಆಗಿ ಒಟಿಟಿಗೇ ಬರಲಿದೆ ಎಂಬ ವದಂತಿ ಗಾಂಧಿನಗರದಲ್ಲಿ ಹಬ್ಬಿದೆ. ಒಂದು ಮೂಲದ ಪ್ರಕಾರ ಎರಡು ಒಟಿಟಿ ಸಂಸ್ಥೆಗಳು 100 ಕೋಟಿಗೂ ಹೆಚ್ಚು ಮೊತ್ತದ ಆಫರ್ ಕೊಟ್ಟಿವೆ.
ದೊಡ್ಡ ಮೊತ್ತದ ಆಫರ್ ಬಂದಿರೋದು ನಿಜ. ಆದರೆ ಒಟಿಟಿಗೇ ಕೊಡಬೇಕಾ.. ಬೇಡವಾ.. ಅನ್ನೋದು ನಿರ್ಧಾರವಾಗಿಲ್ಲ. ಥಿಯೇಟರ್ ಪ್ರೇಕ್ಷಕರಿಗಾಗಿಯೇ 3ಡಿ ವರ್ಷನ್ ಸಿನಿಮಾ ಕೂಡಾ ಮಾಡಿದ್ದೇವೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳೋದರ ಬಗ್ಗೆ ಗೊಂದಲದಲ್ಲಿದ್ದೇನೆ. ಸುದೀಪ್ ಅವರ ಜೊತೆ ಮಾತನಾಡಿ ಇನ್ನೊಂದೆರಡು ವಾರದಲ್ಲಿ ಹೇಳುತ್ತೇನೆ ಎಂದಿದ್ದಾರೆ ಜಾಕ್ ಮಂಜು.