` ನಮಸ್ತೆ ಗೋಷ್ಟ್ ಸುದೀಪ್ ಅವರದ್ದಲ್ಲ. ನನ್ನದು : ಭರತ್ ನಂದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಮಸ್ತೆ ಗೋಷ್ಟ್ ಸುದೀಪ್ ಅವರದ್ದಲ್ಲ. ನನ್ನದು : ಭರತ್ ನಂದ
Namaste Ghost

ಇತ್ತೀಚೆಗೆ ನಮಸ್ತೆ ಗೋಷ್ಟ್ ಅನ್ನೋ ವಿಭಿನ್ನ ಟೈಟಲ್ ಇರೋ ಹೆಸರಿನ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಕೇವಲ ಪೋಸ್ಟರ್ ಅಷ್ಟೇ ಇದ್ದ ಆ ಚಿತ್ರದಲ್ಲಿ ಸುದೀಪ್ ಹೀರೋ ಅಂತೆ ಎಂದು ಭರ್ಜರಿ ಸುದ್ದಿಯಾಗಿತ್ತು. ಕೊನೆಗೆ ಆ ಚಿತ್ರಕ್ಕೂ ತಮಗೂ ಸಂಬಂಧವಿಲ್ಲ ಎಂದು ಸುದೀಪ್ ಹಾಗೂ ಜಾಕ್ ಮಂಜು ಸ್ಪಷ್ಟನೆ ಕೊಟ್ಟಿದ್ದರು. ಹಾಗಾದರೆ ಆ ಚಿತ್ರ ಯಾರದು?

ಅದು ನನ್ನ ಚಿತ್ರ. ನನ್ನದೇ ನಿರ್ದೇಶನ. ನಾನೇ ಹೀರೋ ಎಂದಿದ್ದಾರೆ ಭರತ್ ನಂದ. ಈ ಹಿಂದೆ ಡಯಾನಾ ಹೌಸ್ ಅನ್ನೋ ಸಿನಿಮಾ ನಿರ್ದೇಶನ ಮಾಡಿದ್ದ ಭರತ್ ನಂದ, ಈಗ ನಮಸ್ತೆ ಗೋಷ್ಟ್ ಕೈಗೆತ್ತಿಕೊಂಡಿದ್ದಾರೆ. ಪೋಸ್ಟರ್‍ನಲ್ಲಿರೋದು ಕೂಡಾ ಅವರೇ. ರಮೇಶ್ ಕುಮಾರ್ ಚಿತ್ರದ ನಿರ್ಮಾಪಕರು. ಭರತ್ ನಂದ ಎದುರು ವಿದ್ಯಾ ರಾಜ್ ನಾಯಕಿಯಾಗಿ ನಟಿಸುತ್ತಿದ್ದಾರೆ.