` ಸಂಕ್ರಾಂತಿಗೆ ತೆಲುಗಿನಲ್ಲೂ ರಚ್ಚು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಂಕ್ರಾಂತಿಗೆ ತೆಲುಗಿನಲ್ಲೂ ರಚ್ಚು
Rachita Ram

ರಚಿತಾ ರಾಮ್ ಅದೆಷ್ಟು ಬ್ಯುಸಿಯಾಗಿದ್ದಾರೆ ಎಂದರೆ.. ಒಂದೆಡೆ ಶೂಟಿಂಗ್.. ಮತ್ತೊಂದೆಡೆ ಪ್ರಚಾರ.. ಮಗದೊಂದು ಕಡೆ ಸಿನಿಮಾ ರಿಲೀಸ್.. 2021ರಲ್ಲಿ 100, ಲವ್ ಯೂ ರಚ್ಚು ರಿಲೀಸ್ ಆಗಿದ್ದವು. ಈ ವರ್ಷ ಕನ್ನಡದಲ್ಲಿ ಆಗಲೇ ಏಕ್ ಲವ್ ಯಾ ಕ್ರೇಜ್ ಹುಟ್ಟಿಸಿದೆ. ಇದರ ಮಧ್ಯೆ ರಚಿತಾ ತೆಲುಗಿನಲ್ಲಿ ನಟಿಸಿದ್ದ ಸೂಪರ್ ಮಚ್ಚಿ ಈ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ.

ಕಲ್ಯಾಣ್ ದೇವ್ ನಾಯಕನಾಗಿರೋ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ಚಿತ್ರ ಕನ್ನಡಕ್ಕೂ ಡಬ್ ಆಗಿ ಬರುತ್ತಿದೆ. ಪುಲಿವಾಸು ನಿರ್ದೇಶನದ ಚಿತ್ರದ ಮೂಲಕ ರಚಿತಾ ರಾಮ್ ತೆಲುಗರಿಗೂ ಡಾರ್ಲಿಂಗ್ ಆಗಲಿದ್ದಾರೆ.