` ಭಯ ಹುಟ್ಟಿಸೋಕೆ ಬರುತ್ತಿದ್ದಾರೆ ನಗಿಸೋ ಅನುಶ್ರೀ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಭಯ ಹುಟ್ಟಿಸೋಕೆ ಬರುತ್ತಿದ್ದಾರೆ ನಗಿಸೋ ಅನುಶ್ರೀ
Anushree

ಅನುಶ್ರೀ ಅಂದ್ರೇನೇ ನಗು. ಸಿನಿಮಾಗಳಿಗಿಂತ ಹೆಚ್ಚು ಟಿವಿಯಲ್ಲೇ ಕಾಣಿಸಿಕೊಳ್ಳೋ ನಮ್ಮನೆ ಹುಡ್ಗಿ ಫೇಮ್‍ನ ಅನುಶ್ರೀ ಈಗ ಹೆದರಿಸೋಕೆ ಬರುತ್ತಿದ್ದಾರೆ. ಪ್ರಭಾಕರನ್ ಚಿತ್ರದ ಡೈರೆಕ್ಟರ್. ಮಮ್ಮಿ, ದೇವಕಿ  ಸಿನಿಮಾ ಮೂಲಕ ಹೆಸರು ಮಾಡಿದ್ದ ಲೋಹಿತ್ ಅವರ ಬಳಿ ಅಸಿಸ್ಟೆಂಟ್ ಆಗಿದ್ದ ಪ್ರಭಾಕರನ್ ಈಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. 4 ವರ್ಷಗಳ ನಂತರ ಅನುಶ್ರೀ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ.

ಕೆಟ್ಟ ಹಾರರ್ ಚಿತ್ರಗಳನ್ನೂ ಅರೆಕ್ಷಣವೂ ಬಿಡದೆ ನೋಡುವವಳು ನಾನು. ಅಂಥಾದ್ದರಲ್ಲಿ ನನಗೆ ಹಾರರ್ ಚಿತ್ರದ ಕಥೆಯೇ ಸಿಕ್ಕಿತು. ಕಥೆಯೂ ಚೆನ್ನಾಗಿದೆ. ನರೇಷನ್ ಕೂಡಾ ಹಿಡಿಸಿತು. ಖಂಡಿತಾ ಈ ಚಿತ್ರ ಭಯ ಹುಟ್ಟಿಸುತ್ತೆ ಅಂತಾರೆ ಅನುಶ್ರೀ.

ದುಷ್ಟಶಕ್ತಿ,  ಆತ್ಮಗಳನ್ನು ಆರಾಧಿಸುವವರ ಕಥೆ ಇಟ್ಟುಕೊಂಡು ಸಿದ್ಧವಾಗುತ್ತಿರುವ ಚಿತ್ರಕ್ಕೆ ಪಾರ್ಥಿಬನ್, ಪುನೀತ್ ಹೆಚ್. ಬೆನ್ನೆಲುಬಾಗಿದ್ದಾರೆ. ಲೋಹಿತ್ ಬ್ಯಾನರ್‍ನಲ್ಲೇ ಚಿತ್ರ ತಯಾರಾಗುತ್ತಿದೆ.