ದುನಿಯಾ ವಿಜಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪುಟ್ಟ ಪುಟ್ಟ ಪಾತ್ರಗಳ ಮೂಲಕ. ಖಳನಟನಾಗಿ ಗುರುತಿಸಿಕೊಂಡಿದ್ದ ವಿಜಯ್ ಅವರ ಹಣೆಬರಹ ಬದಲಿಸಿದ್ದು ದುನಿಯಾ. ನಂತರ ಸ್ಟಾರ್ ಆದ ವಿಜಯ್ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕರಾಗಿಯೂ ಗೆದ್ದ ದುನಿಯಾ ವಿಜಯ್ ಈಗ ಮತ್ತೆ ವಿಲನ್ ಆಗುತ್ತಿರುವುದು ಅಧಿಕೃತವಾಗಿದೆ.
ತೆಲುಗಿನ ಬಾಲಕೃಷ್ಣ ಎದುರು ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಈ ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಚಾಲ್ತಿಯಲ್ಲಿತ್ತಾದರೂ ಅಧಿಕೃತವಾಗಿರಲಿಲ್ಲ. ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಶೃತಿ ಹಾಸನ್ ಹೀರೋಯಿನ್.
ನನಗೆ ಚಿತ್ರರಂಗಕ್ಕೆ ಬರುವ ಕನಸು ಕೂಡಾ ಇಲ್ಲದ ದಿನಗಳಿಂದಲೂ ಬಾಲಯ್ಯ ಚಿತ್ರಗಳನ್ನು ನೋಡುತ್ತಿದ್ದೆ. ಈಗ ಅವರೊಂದಿಗೇ ನಟಿಸುವ ಅದೃಷ್ಟ. ನನಗೆ ತೆಲುಗು ಚೆನ್ನಾಗಿಯೇ ಬರುತ್ತೆ. ಹೀಗಾಗಿ ಕಷ್ಟವಾಗಲಿಕ್ಕಿಲ್ಲ. ಜನವರಿ 15ರಿಂದ ಹೈದರಾಬಾದ್‍ನಲ್ಲಿ 3 ತಿಂಗಳು ಶೂಟಿಂಗ್ ಇದೆ ಎಂದಿದ್ದಾರೆ ವಿಜಯ್.