ಬಿ.ಸಿ.ಪಾಟೀಲ್ ನಿರ್ಮಾಣದಲ್ಲಿ ಶುರುವಾಗಿರುವ ಗರಡಿ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವುದು ಗೊತ್ತಿದೆ ತಾನೇ.. ಈಗ ಆ ಗರಡಿಗಾಗಿ ಗರಡಿಮನೆ ಹುಡುಕಾಟದಲ್ಲಿದ್ದಾರೆ ಯೋಗರಾಜ್ ಭಟ್.
ಗರಡಿ ಚಿತ್ರದ ಸಾಹಸ ನಿರ್ದೇಶಕರೂ ಆಗಿರುವ ಕೌರವ ವೆಂಕಟೇಶ್ ಅವರ ಜೊತೆ ಮೈಸೂರಿನ ಗರಡಿ ಮನೆಗಳಿಗೆ ಭೇಟಿ ಕೊಡುತ್ತಿದ್ದಾರೆ ಭಟ್ಟರು. ಅಲ್ಲಿನ ಕುಸ್ತಿಪಟುಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಗರಡಿ ಮನೆಯ ಕುರಿತು ಸಿನಿಮಾ ಭಟ್ಟರಿಗೂ ಹೊಸದು. ಹಾಗಂತ ಗರಡಿ ಮನೆಗಳ ಬಗ್ಗೆ ಗೊತ್ತೇ ಇಲ್ಲ ಎಂದೇನಲ್ಲ. ಈ ಬಾರಿ ಭಟ್ಟರ ಜೊತೆ ಯಶಸ್ ಸೂರ್ಯ, ರಚಿತಾ ರಾಮ್ ಕೂಡಾ ಇದ್ದಾರೆ.