ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ದೊಡ್ಡ ಬಿಸಿನೆಸ್ ಮಾಡಿದೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಕೂಡಾ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ವಿಕ್ರಾಂತ್ ರೋಣ. ಫೆಬ್ರವರಿ 24ರಂದು ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ.
ಈಗ ರಿಲೀಸ್ ಆಗುವುದಕ್ಕೂ ಮೊದಲೇ ಚಿತ್ರದ ಸ್ಯಾಟಲೈಟ್ ಮತ್ತು ಓಟಿಟಿ ರೈಟ್ಸ್‍ಗಳಲ್ಲಿ 24 ಕೋಟಿ ಬಿಸಿನೆಸ್ ಮಾಡಿದೆ ಎನ್ನುವ ಸುದ್ದಿ ಇದೆ. ಡಬ್ಬಿಂಗ್, ಆಡಿಯೋ ರೈಟ್ಸ್‍ಗಳು ಇನ್ನೂ ನಿರ್ಮಾಪಕರ ಬಳಿಯೇ ಇದೆ. ಚಿತ್ರದ ಬಜೆಟ್ ಈಗಾಗಲೇ 50 ಕೋಟಿ ದಾಟಿದೆ. ಝೀ ಗ್ರೂಪ್‍ನವರು ಓಟಿಟಿ ಮತ್ತು ಸ್ಯಾಟಲೈಟ್ ಖರೀದಿಸಿದ್ದಾರೆ. ಪ್ರಚಾರವನ್ನೂ ಅವರೇ ವಹಿಸಿಕೊಂಡಿದ್ದಾರೆ.
ಸದ್ಯಕ್ಕೆ ಇವಿಷ್ಟು ಬಿಸಿನೆಸ್‍ನಲ್ಲೇ ಚಿತ್ರದ ಬಹುಪಾಲು ಬಂಡವಾಳ ವಾಪಸ್ ಬಂದಂತಾಗಿದ್ದು, ಥಿಯೇಟರಿನಲ್ಲೂ ಚಿತ್ರ ದಾಖಲೆ ಬರೆಯುವ ನಿರೀಕ್ಷೆ ಇದೆ.