ಓಲ್ಡ್ ಮಾಂಕ್. ಫೆಬ್ರವರಿಯಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ. ಶ್ರೀನಿ, ಅದಿತಿ ಪ್ರಭುದೇವ, ಎಸ್.ನಾರಾಯಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರ ಓಲ್ಡ್ ಮಾಂಕ್. ಚಿತ್ರದಲ್ಲಿ ನಾರದನ ಕಥೆಯೂ ಇದೆ. ವಿಭಿನ್ನ ಕಥೆಯ ಚಿತ್ರವನ್ನು ವಿಭಿನ್ನವಾಗಿಯೇ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಅದು ಅನಾಗ್ಲಿಫ್ ಪ್ರಮೋಷನ್.
ಏನಿದು ಅನಾಗ್ಲಿಫ್ ಪ್ರಮೋಷನ್ ಎಂದು ತಲೆಕೆಡಿಸಿಕೊಳ್ಳಬೇಡಿ. ಇದು ಅನಾಗ್ಲಿಫ್ ಎಂದು ಕರೆಯಲ್ಪಡೋ 3ಡಿ ಸ್ಟಾಂಡಿ. ಇಲ್ಲಿ ಎರಡು ಕನ್ನಡಕಗಳಿರುತ್ತವೆ. ಒಂದು ಕೆಂಪು, ಇನ್ನೊಂದು ನೀಲಿ. ಒಂದು ಕಡೆಯಿಂದ ನಾಯಕನ ಪಾತ್ರ ಕಾಣಿಸಿದರೆ, ಇನ್ನೊಂದು ಕಡೆಯಿಂದ ನಾರದನ ಪಾತ್ರ ಕಾಣಿಸುತ್ತೆ. ಈ ಅನಾಗ್ಲಿಫ್ ಟೆಕ್ನಾಲಜಿಯನ್ನು ಬಳಸುತ್ತಿರುವ ಮೊದಲ ಕನ್ನಡ ಚಿತ್ರ ಓಲ್ಡ್ ಮಾಂಕ್. ರಾಜ್ಯದಲ್ಲಿ ಸುಮಾರು 70 ಕಡೆ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ ಹೀರೋ ಕಂ ನಿರ್ದೇಶಕ ಶ್ರೀನಿವಾಸ್.
ಪ್ರದೀಪ್ ಶರ್ಮಾ, ಸೃಜನ್ ಯರಬೋಲು, ಸೌರಭ್-ವೈಭವಿ ಮತ್ತು ಶ್ರೀನಿ ಚಿತ್ರದ ನಿರ್ಮಾಣಕ್ಕೆ ಹೆಗಲು ಕೊಟ್ಟಿದ್ದಾರೆ.