ಲವ್ ಯೂ ರಚ್ಚು ಚಿತ್ರದ ಕಥೆ ಕೇಳಿದಾಗ ಕೃಷ್ಣನ್ ಲವ್ ಸ್ಟೋರಿ ಮಾದರಿಯಲ್ಲಿ ಟೈಟಲ್ ಇಡೋಣ ಎಂದುಕೊಂಡ್ವಿ. ಕಥೆಯಲ್ಲಿ ಲವ್ ಸ್ಟೋರಿ ಇತ್ತು. ಎಲ್ಲರಿಗೂ ಇಷ್ಟವಾಗಿತ್ತು. ಅವಳ ಪ್ರೀತಿಗಾಗಿ ಆತ ಮಾಡುವ ಫೈಟ್ಸ್ ಇಷ್ಟವಾಗಿತ್ತು. ಟೈಟಲ್ ಏನಿಡೋಣ ಎಂದಾಗ..
ಶಶಾಂಕ್ ಸರ್ ನಿನ್ನ ಜೊತೆ ನಟಿಸಿರೋ ನಾಯಕಿಯರ ಹೆಸರು ಹೇಳ್ತಾ ಹೋಗು ಅಂದ್ರು. ನನ್ನ ಜೊತೆ ನಟಿಸಿದ ಮೊದಲ ನಾಯಕಿ ರಮ್ಯಾ. ಅಲ್ಲಿಂದ ಲವ್ ಯೂ ರಮ್ಯಾ ಎಂದು ಶುರುವಾಯ್ತು. ಒಬ್ಬೊಬ್ಬರೇ ನಾಯಕಿಯರ ಹೆಸರು ಹೇಳ್ತಾ ಹೋದೆವು. ಅದು ಮುಗಿದ ಮೇಲೆ ಬೇರೆ ಬೇರೆ ನಾಯಕಿಯ ಹೆಸರು ಟ್ರೈ ಮಾಡ್ತಾ ಹೋದೆವು. ಆಗ ಲವ್ ಯೂ ರಚ್ಚು ಅನ್ನೋ ಟೈಟಲ್ ಸೌಂಡಿಂಗ್ ಇಷ್ಟವಾಯ್ತು. ಅದೇ ಫೈನಲ್ಲೂ ಆಯ್ತು ಎನ್ನುತ್ತಾರೆ ಅಜಯ್ ರಾವ್.
ಅಂದಹಾಗೆ ಲವ್ ಯೂ ರಚ್ಚು ಚಿತ್ರಕ್ಕೆ ಕಥೆ ಬರೆದಿರುವುದು ಅಜಯ್ ರಾವ್ಗೆ ಹಿಟ್ ಮೇಲೆ ಹಿಟ್ ಕೊಟ್ಟಿರುವ ನಿರ್ದೇಶಕ ಶಶಾಂಕ್. ಲವ್ ಯೂ ರಚ್ಚುಗೆ ಡೈರೆಕ್ಟರ್ ಶಂಕರ್ ಎಸ್.ರಾಜ್. ಗುರು ದೇಶಪಾಂಡೆ ನಿರ್ಮಾಣದ ಚಿತ್ರದಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್.