ಹೋಮ್ಲಿ ಹುಡುಗಿಯಾಗಿಯೇ ಗುರುತಿಸಿಕೊಂಡಿದ್ದ ರಚಿತಾ ರಾಮ್ ಮೊದಲ ಬಾರಿಗೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಐ ಲವ್ ಯೂ ಚಿತ್ರದಲ್ಲಿ. ಉಪೇಂದ್ರ ಜೊತೆ ಬೆಡ್‍ರೂಂ ಸೀನ್‍ನಲ್ಲಿ ರಸಿಕರ ಹೃದಯ ಬೆಚ್ಚಗಾಗಿಸಿದ್ದ ರಚಿತಾ, ನಂತರ ಕಣ್ಣೀರಿಟ್ಟಿದ್ದರು. ಇನ್ನು ಮುಂದೆ ಅಂತಾ ಸೀನ್‍ಗಳಲ್ಲಿ ಮಾಡಲ್ಲ ಎಂದಿದ್ದ ರಚ್ಚು ಈಗ ಬ್ಯಾಕ್ ಟು ಬ್ಯಾಕ್ 2 ಚಿತ್ರಗಳಲ್ಲಿ ಬೋಲ್ಡ್ ಆಗಿದ್ದಾರೆ. ಲವ್ ಯೂ ರಚ್ಚು ಚಿತ್ರದಲ್ಲಿ ಅಜಯ್ ರಾವ್ ಜೊತೆ ಬೆಡ್‍ರೂಂ ದೃಶ್ಯಗಳಿವೆ. ಅದರ ಬೆನ್ನಲ್ಲೇ ಏಕ್ ಲವ್ ಯಾ ಚಿತ್ರದಲ್ಲಿ ಹೊಸ ಹೀರೋ ರಾಣಾ ಜೊತೆ ಲಿಪ್ ಲಾಕ್ ಸೀನ್ ಇದೆ.
ನಾನು ಆ ರೀತಿ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥವಿರುತ್ತೆ. ಸುಮ್ ಸುಮ್ನೆ ಮಾಡಲ್ಲ. ಬೋಲ್ಡ್ ದೃಶ್ಯಗಳಲ್ಲಿ ಮಾಡಿದ್ದೇನೆ ನಿಜ. ಆ ರೀತಿ ಯಾಕೆ ಮಾಡಿದ್ದೇನೆ ಅನ್ನೋದು ಸಿನಿಮಾ ನೋಡಿದ ಮೇಲೆ ನಿಮಗೇ ಗೊತ್ತಾಗುತ್ತೆ ಎಂದಿದ್ದಾರೆ ರಚಿತಾ ರಾಮ್. ದೃಶ್ಯಗಳಲ್ಲಿ ನಾನು ಸಿಗರೇಟು ದೃಶ್ಯ ನೋಡಿದಾಗ ಪರವಾಗಿಲ್ಲ, ನ್ಯಾಚುರಲ್ಲಾಗಿಯೇ ಮಾಡಿದ್ದೇನೆ ಎಂದುಕೊಂಡರಂತೆ ರಚಿತಾ ರಾಮ್.
ಫ್ರಸ್ಟ್ರೇಷನ್, ಸೇಡು ಇರುವ ವ್ಯಕ್ತಿಯ ಪಾತ್ರ ರಚಿತಾ ಅವರದ್ದು ಎಂದು ಸಣ್ಣದೊಂದು ಕ್ಲೂ ಕೊಟ್ಟಿರುವ ಜೋಗಿ ಪ್ರೇಮ್ ಮಿಕ್ಕಿದ್ದನ್ನೆಲ್ಲ ಜನವರಿಯಲ್ಲಿ ಸಿನಿಮಾ ರಿಲೀಸ್ ಆದಮೇಲೆ ಹೇಳಲಿದ್ದಾರೆ.