ಲವ್ ಯೂ ರಚ್ಚು ಚಿತ್ರದ ಮೊದಲ ಹಾಡು ಹೊರಬಿದ್ದ ಕೂಡಲೇ ಚರ್ಚೆಯಾಗಿದ್ದು ಚಿತ್ರದ ಬೆಡ್‍ರೂಂ ದೃಶ್ಯ. ರೊಮ್ಯಾನ್ಸ್. ಹಾಗಂತ ಚಿತ್ರದಲ್ಲಿ ಕೇವಲ ಅದೊಂದೇ ಇಲ್ಲ. ಚಿತ್ರದಲ್ಲಿ ಇನ್ನೂ ವಿಭಿನ್ನವಾದ ಟರ್ನು ಟ್ವಿಸ್ಟುಗಳಿರುವ ಪ್ರೀತಿಯಿರೋ ಥ್ರಿಲ್ ಕೊಡೋ ಕಥೆಯೂ ಇದೆ ಅನ್ನೋದು ಗೊತ್ತಾಗಿದ್ದು ಚಿತ್ರದ ಟ್ರೇಲರ್ ಹೊರಬಿದ್ದಾಗ..
ಚಿತ್ರರಂಗದಲ್ಲಿ ನನ್ನದು ಹೆಚ್ಚೂ ಕಡಿಮೆ 13-14 ವರ್ಷಗಳ ಜರ್ನಿ. ಮೊದಲು ಕೋಡ್ಲು ರಾಮಕೃಷ್ಣ ಅವರ ಬಳಿ ಅಸಿಸ್ಟೆಂಟ್ ಆಗಿದ್ದೆ. ನಂತರ ಗುರು ದೇಶಪಾಂಡೆ ಅವರ ಬಳಿ ಅಸಿಸ್ಟೆಂಟ್ ಆದೆ. ಅವರೇ ನನಗೆ ಲವ್ ಯೂ ರಚ್ಚು ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನನ್ನಾಗಿ ಮಾಡಿದರು ಎನ್ನುವ ನಿರ್ದೇಶಕ ಶಶಾಂಕ್ ಎಸ್.ರಾಜ್ ಚಿತ್ರದಲ್ಲಿ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯಿದೆ ಎನ್ನುತ್ತಾರೆ.
ಹೊಸದಾಗಿ ಮದುವೆಯಾದ ಜೋಡಿಯ ಬದುಕಲ್ಲಿ ನಡೆಯುವ ಒಂದು ಅನಿರೀಕ್ಷಿತ ಘಟನೆ ಅವರಿಬ್ಬರಿಗೂ ಅಗ್ನಿ ಪರೀಕ್ಷೆಯಾಗುತ್ತೆ. ಅಜಯ್ ಅವರಿಗಾಗಿಯೇ ಶಶಾಂಕ್ ಅವರು ಬರೆದ ಕಥೆ ಇದು. ಅಜಯ್ ಮತ್ತು ರಚಿತಾ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ರೊಮ್ಯಾಂಟಿಕ್ ಥ್ರಿಲ್ಲರ್ ಅದ್ಭುತ ನೀಡಲಿದೆ ಎನ್ನುತ್ತಾರೆ ಶಶಾಂಕ್ ಎಸ್.ರಾಜ್. ಲವ್ ಯೂ ರಚ್ಚು ಇದೇ ಡಿ.31ಕ್ಕೆ ರಿಲೀಸ್ ಆಗುತ್ತಿದೆ