ಲವ್ ಯೂ ರಚ್ಚು ಚಿತ್ರದ ರೊಮ್ಯಾನ್ಸ್ ಹಾಡು ಹೊರಬಿದ್ದಾಗ.. ಅರೆರೇ.. ಏನಿದು ರಚಿತಾ ರಾಮ್ ಇಷ್ಟೊಂದು ಹಾಟ್ ಆಗಿದ್ದಾರಾ? ಹಾಟ್ ಸೀನ್ ಮಾಡಲ್ಲ ಅಂತಿದ್ರಲ್ಲ.. ಏನ್ ಮೇಡಂ ಅನ್ನೋ ಪ್ರಶ್ನೆ ರಚಿತಾಗೆ ಎದುರಾಗಿತ್ತು. ಅದರಲ್ಲೇನಿದೆ.. ಮದುವೆ ಆದವರು ಫಸ್ಟ್ ನೈಟ್‍ನಲ್ಲಿ ಏನ್ ಮಾಡ್ತಾರೋ ಅದನ್ನೇ ನಾವು ಮಾಡಿರೋದು..
ಏನ್ ಮಾಡ್ತಾರೆ ಹೇಳಿ.. ಎಂದು ರಚಿತಾ ತಿರುಗಿ ಕೇಳಿದ್ದ ಬೋಲ್ಡ್ ಪ್ರಶ್ನೆಗೆ ಪ್ರಶ್ನೆ ಕೇಳಿದ್ದವರೇ ಬಾಯಿ ಮುಚ್ಚಿಕೊಂಡಿದ್ದರು. ಚಿತ್ರದ ಪೋಸ್ಟರ್‍ಗಳಲ್ಲಿ ಹೈಲೈಟ್ ಆಗಿದ್ದೂ ಕೂಡಾ ಅದೇ ಸೀನ್. ರಚಿತಾ ಮತ್ತು ಅಜಯ್ ರಾವ್ ಬೆಡ್‍ರೂಂ ಸೀನ್‍ನ ಪೋಸ್ಟರ್.
ಆದರೆ.. ಇದರ ಜೊತೆ ಅರ್ಜುನ್ ಗೌಡ ಕೂಡಾ ಪೈಪೋಟಿಗೆ ಬಿದ್ದರಾ? ಏಕೆಂದರೆ ಈಗ ರಿಲೀಸ್ ಆಗಿರೋ ಪೋಸ್ಟರುಗಳಲ್ಲಿ ಸೇಮ್ ಟು ಸೇಮ್ ಅದೇ ರೀತಿಯ ರೊಮ್ಯಾನ್ಸ್ ಪೋಸ್ಟರ್ ಸದ್ದು ಮಾಡ್ತಿದೆ. ಇಲ್ಲಿ ಪ್ರಿಯಾಂಕಾ ತಿಮ್ಮೇಶ್ ಜೊತೆ ಬೆಡ್ ಹಂಚಿಕೊಂಡಿರೋದು ಪ್ರಜ್ವಲ್ ದೇವರಾಜ್.
ಎರಡೂ ಚಿತ್ರಗಳು ರಿಲೀಸ್ ಆಗ್ತಿರೋದು ಡಿಸೆಂಬರ್ 31ರಂದು. ಒಂದು ಗುರುದೇಶಪಾಂಡೆ ಸಿನಿಮಾ. ಇನ್ನೊಂದು ಕೋಟಿ ರಾಮು ಕೊನೆಯ ಸಿನಿಮಾ. ಒಟ್ಟಿನಲ್ಲಿ ಇದು ಬಾಕ್ಸಾಫೀಸ್‍ನಲ್ಲಷ್ಟೇ ಅಲ್ಲ.. ರೊಮ್ಯಾನ್ಸ್‍ನಲ್ಲೂ ಪೈಪೋಟಿ ಎನ್ನಬಹುದು.