ರೈಡರ್ ಚಿತ್ರದಲ್ಲಿ ನಿಖಿಲ್ ಹೀರೋ. ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ಆ ಚಿತ್ರಕ್ಕೆ ಈಗ ಅಪ್ಪ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆಯೂ ಸಿಕ್ಕಿದೆ. ಕುಮಾರಸ್ವಾಮಿ ರಾಜಕೀಯಕ್ಕೆ ಬರೋ ಮೊದಲು ಚಿತ್ರ ವಿತರಕ ಮತ್ತು ನಿರ್ಮಾಪಕರಾಗಿದ್ದವರು. ಚಿತ್ರಗಳ ಕ್ವಾಲಿಟಿಯನ್ನು ಕರಾರುವಾಕ್ ಆಗಿ ಅಳೆಯೋದ್ರಲ್ಲಿ ಕುಮಾರಸ್ವಾಮಿ ದಿ ಬೆಸ್ಟ್ ಎನಿಸಿಕೊಂಡಿದ್ದವರು. ಅವರೀಗ ರೈಡರ್ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ.
ಮೊದಲ ಚಿತ್ರಕ್ಕಿಂತ ಈಗ ಇನ್ನೂ ಚೆನ್ನಾಗಿ ನಟಿಸಿದ್ದಾನೆ. ನಿಖಿಲ್‍ಗೆ ರಾಜಕೀಯಕ್ಕಿಂತ ಚಿತ್ರರಂಗದಲ್ಲೇ ಒಳ್ಳೆಯ ಭವಿಷ್ಯ ಇದೆ. ಅವನಲ್ಲೊಬ್ಬ ಒಳ್ಳೆಯ ಕಲಾವಿದನಿದ್ದಾನೆ. ಚಿತ್ರರಂಗಕ್ಕೂ ಒಳ್ಳೊಳ್ಳೆಯ ಕಲಾವಿದರ ಅಗತ್ಯ ಇದೆ. ಚಿತ್ರರಂಗಕ್ಕೀಗ ಪುನೀತ್ ಅವರಂತಹ ನಟ ಬೇಕು. ನಿಖಿಲ್ ಅವರ ರೈಡರ್ ಚಿತ್ರ ನೋಡಿದೆ. ಚೆನ್ನಾಗಿದೆ. ಕ್ರೌರ್ಯ ಹಿಂಸೆ ಇಲ್ಲದ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳೋ ಸಿನಿಮಾ ರೈಡರ್ ಎಂದಿದ್ದಾರೆ ಹೆಚ್‍ಡಿಕೆ.