ಜೋಗಿ ಪ್ರೇಮ್ ಚಿತ್ರಗಳೆಂದರೆ ಹಾಡುಗಳು ಅದ್ಬುತವಾಗಿರಲೇಬೇಕು. ಪ್ರೇಮ್ ತಮ್ಮ ಸಿನಿಮಾಗಳಿಗೆ ಪ್ರೇಕ್ಷಕರಿಗೆ ಸ್ವಾಗತ ಕೋರೋದೇ ಹಾಡುಗಳ ಮೂಲಕ. ಕರಿಯಾ ಚಿತ್ರದಿಂದ ಹಿಡಿದು ಜನವರಿಯಲ್ಲಿ ರಿಲೀಸ್ ಆಗಲಿರುವ ಏಕ್ ಲವ್ ಯಾ ಚಿತ್ರದವರೆ ಇದು ಚೆನ್ನಾಗಿಯೇ ನಡೆದುಕೊಂಡು ಬಂದಿದೆ. ಈಗ ಏಕ್ ಲವ್ ಯಾ ಚಿತ್ರದ ಮೀಟ್ ಮಾಡಣ.. ಇಲ್ಲ ಡೇಟ್ ಮಾಡಣ.. ಹಾಡು ರಿಲೀಸ್ ಆಗಿದೆ. ಇದು ಏಕ್ ಲವ್ ಯಾಗೆ ಪ್ರೇಮ್ ನೀಡಿರುವ 5ನೇ ಇನ್ವಿಟೇಷನ್.
ವಿಜಯ್ ಈಶ್ವರ್ ಸಾಹಿತ್ಯಕ್ಕೆ ಅಷ್ಟೇ ತುಂಟತನದ ಧ್ವನಿ ನೀಡಿರೋದು ಐಶ್ವರ್ಯಾ ರಂಗರಾಜನ್. ಅರ್ಜುನ್ ಜನ್ಯಾ ಮ್ಯೂಸಿಕ್ಕು, ರಚಿತಾ, ರೀಷ್ಮಾ, ರಾಣಾ ತುಂಟಾಟ ಇಡೀ ಹಾಡಿನಲ್ಲಿ ಎದ್ದು ಕಾಣುತ್ತೆ. ಹಾಡು ರಿಲೀಸ್ ಆಗಿದ್ದೇ ತಡ.. ಎಂದಿನಂತೆ ಸೂಪರ್ ಹಿಟ್.