ರೈಡರ್, ಇದೇ ಶುಕ್ರವಾರ ರಿಲೀಸ್ ಆದ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರಿಗೆ ಇಷ್ಟವಾಗಿರೋದು ನಿಖಿಲ್ ನಟನೆ. ಚಿತ್ರದಿಂದ ಚಿತ್ರಕ್ಕೆ ಮಾಗುತ್ತಿರುವ ನಿಖಿಲ್, ರೈಡರ್ ಚಿತ್ರದಲ್ಲಿ ಒಳ್ಳೆಯ ಅಭಿನಯ ಕೊಟ್ಟಿದ್ದಾರೆ. ಹಾಡು, ಡ್ಯಾನ್ಸ್ ಅಷ್ಟೇ ಅಲ್ಲ, ಕಣ್ಣಿನಲ್ಲಿ ಮಾತನಾಡುವ ಕೌಶಲ್ಯವೂ ಈ ಚಿತ್ರದಲ್ಲಿ ನಿಖಿಲ್‍ಗೆ ಸಿದ್ದಿಸಿದಂತಿದೆ.
ನನಗೆ ರಾಜಕೀಯಕ್ಕಿಂತ ನಟನೆ ಇಷ್ಟ. ಕಲಾವಿದನಾಗಬೇಕು ಎನ್ನುವ ಆಸೆ. ರಾಜಕೀಯಕ್ಕೆ ಸಡನ್ ಆಗಿ ಬಂದಿದ್ದು, ನಟನೆಗೆ ಮಾತ್ರ ಸಿದ್ಧತೆ ಮಾಡಿಕೊಂಡೇ ಬಂದೆ ಎಂದು ಹಲವು ಬಾರಿ ಹೇಳಿರುವ ನಿಖಿಲ್, ಅದನ್ನು ರೈಡರ್ ಚಿತ್ರದಲ್ಲಿ ಪ್ರೂವ್ ಮಾಡಿದ್ದಾರೆ ಕೂಡಾ. ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್ ಮಾಸ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಕಾಶ್ಮೀರ ಪರದೇಸಿ ನಿಖಿಲ್‍ಗೆ ಸಾಥ್ ಕೊಟ್ಟಿದ್ದಾರೆ. ಸುಮಾರು 2 ವರ್ಷಗಳ ನಂತರ ತೆರೆ ಕಂಡ ರೈಡರ್ ಅಭಿಮಾನಿಗಳ ಆಸೆ, ನಿರೀಕ್ಷೆಗಳ ಗುರಿ ಮುಟ್ಟಿದೆ