sಸೆಪ್ಟೆಂಬರ್ 10ರಂದು ರಿಲೀಸ್ ಆಗಿದ್ದ ಲೂಸ್ ಮಾದ ಯೋಗಿ ನಟನೆಯ ಸಿನಿಮಾ ಲಂಕೆ. ಎಂ.ಡಿ.ರಾಮ್ ಪ್ರಸಾದ್ ನಿರ್ದೇಶನದ ಚಿತ್ರ ಅಪರೂಪದ ಕಥೆಗೆ ಕೈ ಹಾಕಿ ಗೆದ್ದಿತ್ತು. ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ, ಕೃಷಿ ತಾಪಂಡ, ಈಸ್ತರ್ ನರೋನ್ಹಾ, ಶರತ್ ಲೋಹಿತಾಶ್ವ ಮೊದಲಾದವರ ನಟಿಸಿದ್ದ ಲಂಕೆ ಈಗ 100 ದಿನ ಪೂರೈಸಿದೆ.
ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್‍ಪ್ರಸಾದ್ ನಿರ್ಮಾಣದ ಸಿನಿಮಾ ಇದು. ಸಿನಿಮಾ ರಿಲೀಸ್ ಆದಾಗ ಚಿತ್ರಮಂದಿರಗಳಿಗೆ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶವಿತ್ತು. ಇದರ ನಡುವೆಯೇ ಧೈರ್ಯವಾಗಿ ಸಿನಿಮಾ ರಿಲೀಸ್ ಮಾಡಿತ್ತು ಚಿತ್ರತಂಡ. ಚಿತ್ರವೀಗ ಸಂಯೋಜಿತ 100 ದಿನ ಪೂರೈಸಿದೆ. ಈ ಸಂಭ್ರಮವನ್ನು ಜನವರಿಯಲ್ಲಿ ಸೆಲಬ್ರೇಟ್ ಮಾಡಲು ಚಿತ್ರತಂಡ ಯೋಜಿಸಿದೆ.