ಮೈನಾ, ಸಂಜು ವೆಡ್ಸ್ ಗೀತಾ, ಮಾಸ್ತಿಗುಡಿ, ಅಮರ್.. ಮೊದಲಾದ ಸಿನಿಮಾಗಳ ಖ್ಯಾತ ನಿರ್ದೇಶಕ ನಾಗಶೇಖರ್ ಅವರಿಗೆ ವಂಚನೆಯಾಗಿದೆ. ಸ್ವಂತದ್ದೊಂದು ಮನೆ ಮಾಡುವ ಕನಸು ಕಂಡಿದ್ದ ನಾಗಶೇಖರ್ ಅವರಿಗೆ ಪರಿಚಯವಾಗಿದ್ದು ಮೀನಾ ಮತ್ತು ರಾಜ್‍ಕುಮಾರ್. ಆರ್.ಆರ್. ನಗರದ ಜಯಣ್ಣ ಲೇಔಟ್‍ನಲ್ಲಿ ಮನೆ ಇಷ್ಟವೂ ಆಯ್ತು. 2 ಕೋಟಿ, 70 ಲಕ್ಷಕ್ಕೆ ಮಾತುಕತೆಯೂ ಆಯ್ತು. ನಾಗಶೇಖರ್ ಹಂತ ಹಂತವಾಗಿ ಒಟ್ಟು 50 ಲಕ್ಷ ರೂ. ಹಣವನ್ನು ಮೀನಾ ಅವರ ಖಾತೆಗೆ ವರ್ಗಾಯಿಸಿದರು.
2020ರ ಆಗಸ್ಟ್‍ನಲ್ಲಿ ಅಗ್ರಿಮೆಂಟ್ ಕೂಡಾ ಆಯ್ತು. ಆದರೆ ಆ ಮನೆ ನನ್ನದು ಎಂದುಕೊಂಡಿದ್ದ ನಾಗಶೇಖರ್ ಅವರಿಗೆ ಶಾಕ್ ಆಗಿದ್ದು ಆಮೇಲೆ. ಅದೇ ಮೀನಾ ಮತ್ತು ರಾಜಕುಮಾರ್, ಅದೇ ಮನೆಯನ್ನು ಇನ್ನೊಬ್ಬರಿಗೆ ಸೇಲ್ ಡೀಡ್ ಮಾಡಿದ್ದರು. ಹುಡುಕಿದರೆ ಮೀನಾ ನಾಪತ್ತೆ.
ಈಗ ಅತ್ತ ಹಣವೂ ಇಲ್ಲದೆ, ಇತ್ತ ಮನೆಯೂ ಇಲ್ಲದೆ ನಾಗಶೇಖರ್ ಕಂಗಾಗಲಾಗಿದ್ದಾರೆ. ಆರ್‍ಆರ್ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.