ಆರ್ಥಿಕವಾಗಿ ಶಕ್ತಿಯಿಲ್ಲದ ಬಡವರು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‍ಗೆ ಅರ್ಜಿ ಹಾಕಬೇಕು. ಜನವರಿ 2ರ ಒಳಗೆ ಅರ್ಜಿ ತಲುಪಬೇಕು. ನಂತರ ಅವುಗಳನ್ನು ಸೊಸೈಟಿಯವರು ಕಾನೂನು ರೀತ್ಯಾ ಪರಿಶೀಲಿಸಿ ಎಲ್ಲವೂ ಸರಿಯಿದ್ದರೆ ಮದುವೆ ಮಾಡಿಸುತ್ತಾರೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಮದುವೆ ನಡಯಲಿದೆ. ನಮ್ಮನೆ ಮದುವೆ.
ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಗೆ 5 ವರ್ಷ ತುಂಬುತ್ತಿರೋ ಹಿನ್ನೆಲೆಯಲ್ಲಿ ಈ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಸೊಸೈಟಿಯವರು ಯಾರಿಂದಲೂ ಹಣ ಪಡೆಯುವುದಿಲ್ಲ. ಕೊಟ್ಟರೂ ಸ್ವೀಕರಿಸುವುದಿಲ್ಲ. ಮದುವೆ ಕಾನೂನು ಬದ್ಧವಾಗಿ ಸರಿಯಿದ್ದರೆ ಮಾತ್ರ ಮದುವೆ. ಸದ್ಯಕ್ಕೆ 5 ಜೋಡಿಗಳಿಗೆ ಮಾತ್ರ ಎನ್ನಲಾಗಿದೆ.