ಈಗ ರಿಲೀಸ್ ಆಗಿರೋ ರೈಡರ್ ಸಿನಿಮಾ ಬಹಳಷ್ಟು ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‍ಟೈನರ್ ಎನ್ನುತ್ತಿರೋ ಚಿತ್ರತಂಡ, ಚಿತ್ರ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಅನ್ನೋ ನಿರೀಕ್ಷೆಯಲ್ಲಿದೆ. ನಿರ್ಮಾಪಕರಲ್ಲೊಬ್ಬರಾದ ಸುನಿಲ್ ಗೌಡ ಇದಕ್ಕೆ ಇನ್ನೂ ಒಂದು ವಿಶೇಷಣ ಸೇರಿಸಿದ್ದಾರೆ. ಇದು 100% ಮೇಕ್ ಇನ್ ಇಂಡಿಯಾ ಸಿನಿಮಾವಂತೆ..
ರೈಡರ್ ಚಿತ್ರ ಬಹುತೇಕ ಶೂಟಿಂಗ್ ಆಗಿರೋದು ಮೈಸೂರಿನಲ್ಲಿ. ಯಲ್ಲಾಪುರ, ದೇವನಹಳ್ಳಿ ಹಾಗೂ ಬೆಂಗಳೂರಿನಲ್ಲಿ. ಉಳಿದಂತೆ ಲೇಹ್ ಮತ್ತು ಲಡಾಖ್‍ನಲ್ಲಿ ಶೂಟಿಂಗ್ ಆಗಿದೆ. ವಿಷ್ಯುಯಲ್ ಟ್ರೀಟ್ ಅದ್ಭುತವಾಗಿದೆ. ಹೀಗಾಗಿ ಇದು 100% ಮೇಕ್ ಇನ್ ಇಂಡಿಯಾ ಸಿನಿಮಾ ಎನ್ನುತ್ತಾರೆ ನಿರ್ಮಾಪಕ ಸುನಿಲ್ ಗೌಡ.
ನಿಖಿಲ್ ಕುಮಾರಸ್ವಾಮಿ, ಕಾಶ್ಮೀರ ಪರದೇಸಿ, ಸ್ಪಂದನಾ ಹುಲಿವಾನ ನಟಿಸಿರೋ ಚಿತ್ರದಲ್ಲಿರೋದು ಟ್ರಯಾಂಗಲ್ ಲವ್ ಸ್ಟೋರಿನಾ? ಅರ್ಜುನ್ ಜನ್ಯಾ ಹಾಡುಗಳಲ್ಲಿ ಮೆಲೋಡಿ ಮತ್ತು ಟಪ್ಪಾಂಗುಚ್ಚಿ ಎರಡೂ ಮಿಕ್ಸ್ ಆಗಿದೆ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋ ತರಲೆ ತಮಾಷೆಗಳಿವೆ. ಮೈನವಿರೇಳಿಸೋ ಆ್ಯಕ್ಷನ್ ಇದೆ. ಎದೆ ಭಾರವಾಗಿಸೋ ಸೆಂಟಿಮೆಂಟ್ ಇದೆ. ಅವೆಲ್ಲವನ್ನೂ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಚೆನ್ನಾಗಿ ಬ್ಲೆಂಡ್ ಮಾಡಿ ಕಥೆ ಹೇಳಿದ್ದಾರೆ. ಹೀಗಾಗಿ ಸಿನಿಮಾ ಖಂಡಿತಾ ಗೆಲ್ಲಲಿದೆ ಅನ್ನೋದು ನಿರ್ಮಾಪಕರ ಕಾನ್ಫಿಡೆನ್ಸ್.