ರೈಡರ್ ನಾಳೆ ರಿಲೀಸ್ ಆಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಸುದೀರ್ಘ ಗ್ಯಾಪ್ ನಂತರ ತೆರೆಗೆ ಬರುತ್ತಿರೋ ಚಿತ್ರವಿದು. ಲಹರಿಯವರು ಬಹಳ ಕಾಲದ ನಂತರ ನಿರ್ಮಾಣಕ್ಕೆ ಕೈ ಹಾಕಿರೋ ಚಿತ್ರವೂ ರೈಡರ್. ಈಗಾಗಲೇ ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದ್ದು, ಈಗ ನಟಿ ಹಾಗೂ ರಾಜಕಾರಣಿ ರಮ್ಯಾ ಅರ್ಥಾತ್ ದಿವ್ಯಸ್ಪಂದನ ಕೂಡಾ ನಿಖಿಲ್ ರೈಡರ್‍ಗೆ ಶುಭ ಕೋರಿದ್ದಾರೆ.
ಈ ತಿಂಗಳು ಒಳ್ಳೊಳ್ಳೆ ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿವೆ. ಆಯ್ಕೆಗೆ ಸೀಮಿತರಾಗಬೇಡಿ. ಎಲ್ಲ ಚಿತ್ರಗಳನ್ನೂ ನೋಡಿ. ಬೆಸ್ಟ್ ವಿಷಸ್ ಟು ನಿಖಿಲ್ ಕುಮಾರ್ ಎಂದಿದ್ದಾರೆ ರಮ್ಯಾ. ಬಡವ ರಾಸ್ಕಲ್ ಚಿತ್ರಕ್ಕೂ ರಮ್ಯಾ ಶುಭ ಕೋರಿದ್ದಾರೆ. ಆದರೆ ನಿಖಿಲ್ ಅವರಿಗೆ ಶುಭ ಕೋರಿರುವುದಕ್ಕೆ ವಿಶೇಷ ಅರ್ಥವನ್ನು ಅವರ ರಾಜಕಾರಣದಲ್ಲಿ ಹುಡುಕಬೇಕು.. ಹಾಗಾಗಿಯೇ ಈ ಹಾರೈಕೆಗೆ ವಿಶೇಷ ಅರ್ಥ.
ನಿಖಿಲ್ ಅವರ ಎದುರು ರೈಡರ್‍ನಲ್ಲಿ ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು ವಿಜಯ್ ಕುಮಾರ್ ಕೊಂಡ ನಿರ್ದೇಶಕ.