` ಹಾಡೂ ಬೆಂಕಿ.. ಡಾಲಿ ಡ್ಯಾನ್ಸೂ ಬೆಂಕಿ.. ನಿನ್ ಮಕ್ಕೆ ಬೆಂಕಿ ಹಾಕ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹಾಡೂ ಬೆಂಕಿ.. ಡಾಲಿ ಡ್ಯಾನ್ಸೂ ಬೆಂಕಿ.. ನಿನ್ ಮಕ್ಕೆ ಬೆಂಕಿ ಹಾಕ..
Benki Song from Badava Rascal

ಅರೆರೆರೇ.. ಡಾಲಿ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾರಾ.. ಬೆರಗು ಹುಟ್ಟಿಸುವಂತೆ ಸ್ಟೆಪ್ ಹಾಕಿದ್ದಾರೆ ಡಾಲಿ ಧನಂಜಯ್. ಬಡವ ರಾಸ್ಕಲ್ ಚಿತ್ರದ ನಿನ್ ಮಕ್ಕೆ ಬೆಂಕಿ ಹಾಕ.. ಹಾಡಿನಲ್ಲಿ ಡಾಲಿ ಸ್ಟೆಪ್ಪುಗಳು ವ್ಹಾವ್ ಎನ್ನುವಂತಿವೆ.

ವಾಸುಕಿ ವೈಭವ್ ಅವರ ಟಪ್ಪಾಂಗುಚ್ಚಿ ಮ್ಯೂಸಿಕ್ಕು, ನಿರ್ದೇಶಕ ಶಂಕರ್ ಗುರು ಅವರದ್ದೇ ಸಾಹಿತ್ಯಕ್ಕೆ ಅಷ್ಟೇ ಎನರ್ಜಿ ಸಿಕ್ಕೋದು ಡಾಲಿ ಡ್ಯಾನ್ಸಿನಲ್ಲಿ. ಗೆಳತಿ ಕೈಕೊಟ್ಟ ನೋವಿನಲ್ಲಿ ಹೊಟ್ಟೆ ತುಂಬಾ ಹಾಕ್ಕೊಂಡು ಗೋಳು ಹೇಳಿಕೊಳ್ಳೋ ಹಾಡಿದು ಅನ್ನೋ ಸುಳಿವು ಸಾಹಿತ್ಯದಲ್ಲಿ ಸಿಕ್ಕುತ್ತೆ.

ನಾಳೆ ರಿಲೀಸ್ ಆಗುತ್ತಿರೋ ಬಡವ ರಾಸ್ಕಲ್ ಹಲವಾರು ಕಾರಣಗಳಿಂದಾಗಿ ಗಮನ ಸೆಳೆಯುತ್ತಿದೆ. ಇದು ಡಾಲಿ ಬ್ಯಾನರ್ ಮೊದಲ ಸಿನಿಮಾ. ಒಂದಾನೊಂದು ಕಾಲದಲ್ಲಿ ಕೊರಿಯರ್ ಬಾಯ್ ಆಗಿದ್ದ ಡೈರೆಕ್ಟರ್ ಶಂಕರ್ ಗುರು ಅವರಿಗೂ ಇದು ಫಸ್ಟ್ ಸಿನಿಮಾ.