` ಪುಷ್ಪದ ಬೇಸರ 83, ಆರ್‍ಆರ್‍ಆರ್ ನೀಗಿಸುತ್ತವಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪುಷ್ಪದ ಬೇಸರ 83, ಆರ್‍ಆರ್‍ಆರ್ ನೀಗಿಸುತ್ತವಾ?
Pushpaa Movie Image

ಪುಷ್ಪ ಚಿತ್ರ ರಿಲೀಸ್ ಆಗಿ ಚೆನ್ನಾಗಿ ದುಡ್ಡನ್ನೂ ಮಾಡುತ್ತಿದೆ. ಆದರೆ, ಪುಷ್ಪ ಚಿತ್ರತಂಡ ಕನ್ನಡಿಗರ ಪ್ರೀತಿಗೆ ಘಾಸಿ ಮಾಡಿದ್ದಂತೂ ಸತ್ಯ. ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತೇವೆ ಎಂದ ಪುಷ್ಪ ಚಿತ್ರತಂಡ, ಅದನ್ನು ಕಾಟಾಚಾರಕ್ಕಷ್ಟೇ ಮಾಡಿತ್ತು ಅನ್ನೋದು ಸಾಬೀತಾಗಿತ್ತು. ಪುಷ್ಪ ಚಿತ್ರದ ಪ್ರಚಾರಕ್ಕೆ ಕೊಟ್ಟ ಆಸಕ್ತಿಯನ್ನು ಕನ್ನಡದ ಪುಷ್ಪದ ಬಗ್ಗೆ ನೀಡದೇ ಹೋದಾಗಲೇ ಇದು ಅರ್ಥವಾಗಬೇಕಿತ್ತು.

ಈಗ 83 ಬರುತ್ತಿದೆ. ಸುಮಾರು 50 ಕಡೆ ಕನ್ನಡದ 83 ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಕಡಿಮೆ ಶೋಗಳಿವೆ. ಆದರೆ, ವಿತರಕ ಜಾಕ್ ಮಂಜು ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಡಬ್ಬಿಂಗ್ ಆಗಿ ಬಂದ ಚಿತ್ರಗಳ ಬಗ್ಗೆ ಚಿತ್ರಮಂದಿರದವರೇ ಒಲವು ತೋರಿಸುತ್ತಿಲ್ಲ. ಹೀಗಾಗಿ ಡಬ್ಬಿಂಗ್ ಚಿತ್ರಗಳನ್ನೂ ದೊಡ್ಡ ಮಟ್ಟಕ್ಕೆ ರಿಲೀಸ್ ಮಾಡೋಕೆ ಸ್ವಲ್ಪ ಸಮಯ ಬೇಕು. ಜನ ಮತ್ತು ಮಾಲೀಕರು ಇನ್ನೂ ಒಗ್ಗಿಕೊಂಡಿಲ್ಲ. ಆದರೆ ಜಿಲ್ಲಾ ಮಟ್ಟದಲ್ಲಿ ಒಂದು ಹಿಂದಿ ಮತ್ತು ಒಂದು ಕನ್ನಡ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ. ಅತ್ತ ಆರ್‍ಆರ್‍ಆರ್ ಚಿತ್ರತಂಡ ಕರ್ನಾಟಕದಲ್ಲಿ ಸುಮಾರು 200 ಕಡೆ ಕನ್ನಡದ ಆರ್‍ಆರ್‍ಆರ್ ಬಿಡುಗಡೆಗೆ ಚಿಂತನೆ ಮಾಡಿದೆ.

ಡಬ್ಬಿಂಗ್ ಮಾಡುವುದಷ್ಟೇ ಅಲ್ಲ, ಡಬ್ ಆದ ಚಿತ್ರಗಳ ಕನ್ನಡ ಅವತರಣಿಕೆಯ ಪ್ರಚಾರವನ್ನೂ ಮಾಡಬೇಕು. ಮೂಲ ಚಿತ್ರಗಳನ್ನಷ್ಟೇ ಪ್ರಚಾರ ಮಾಡಿ, ಕನ್ನಡ ಅವತರಣಿಕೆಗೆ ಜನ ಬರಲಿಲ್ಲ ಎಂದರೆ ಏನು ಪ್ರಯೋಜನ? ಪ್ರೆಸ್ ಮೀಟ್ ಮಾಡುವುದಷ್ಟೇ ಪ್ರಚಾರ ಅಲ್ಲವಲ್ಲ