ನನ್ನದು ಸೌಮ್ಯ ಅನ್ನೋ ಹೆಸರಿನ ಪಾತ್ರ. ಅಮೆರಿಕದಿಂದ ಒಂದು ಕೆಲಸದ ಮೇಲೆ ಇಂಡಿಯಾಕ್ಕೆ ಬಂದಿರ್ತೀನಿ. ಏನೇ ಪ್ರಾಬ್ಲಂ ಬರಲಿ, ಹಿಡಿದ ಗುರಿ ಬಿಡದ ಆಟಿಟ್ಯೂಡ್ ಇರೋ ಹುಡುಗಿಯ ಪಾತ್ರ ಅದು. ಹೆಸರು ಮಾತ್ರವೇ ಸೌಮ್ಯ.
ಹೀಗೆ ಹೇಳೋ ಕಾಶ್ಮೀರ ಪರದೇಸಿಗೆ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರ ಪಾತ್ರಕ್ಕೂ ತೂಕವಿದೆ. ಪರ್ಫಾಮೆನ್ಸ್‍ಗೆ ಅವಕಾಶ ಇದೆ. ಅದರಲ್ಲಿ ಮಳೆಯಲ್ಲಿ ನೆನೆಯುವ ದೃಶ್ಯ ನನಗೆ ಫೇವರಿಟ್ ಎನ್ನುತ್ತಾರೆ ಕಾಶ್ಮೀರ ಪರದೇಸಿ.
ವಿಜಯ್ ಕುಮಾರ್ ಕೊಂಡ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಸಹಕಾರ ಮರೆಯೋಕಾಗಲ್ಲ. ಚಿತ್ರದ ಮೇಲೆ ಒಳ್ಳೆಯ ನಿರೀಕ್ಷೆಗಳಂತೂ ಇವೆ ಎನ್ನುವ ಕಾಶ್ಮೀರ ಪರದೇಸಿಗೆ ಬೆಂಗಳೂರು ವಾತಾವರಣ ಇಷ್ಟ. ಟ್ರಾಫಿಕ್ ಅಂದ್ರೆ ಸಿಕ್ಕಾಪಟ್ಟೆ ಕೋಪ.