ರೈಡರ್ ಇದೇ ವಾರ ರಿಲೀಸ್ ಆಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಆಲ್‍ಮೋಸ್ಟ್ 2 ವರ್ಷಗಳ ಗ್ಯಾಪ್ ನಂತರ ಬರುತ್ತಿದ್ದಾರೆ. ನಿಖಿಲ್ ಎದುರು ಇಲ್ಲಿ ಕಾಶ್ಮೀರ ಪರದೇಸಿ ಅನ್ನೋ ಮುದ್ದು ಹುಡುಗಿ ನಾಯಕಿ. ಚಿತ್ರದಲ್ಲಿರೋದು ಮಾಸ್ ಲವ್ ಆ್ಯಕ್ಷನ್ ಸೆಂಟಿಮೆಂಟ್ ಕಥೆ.
ಚಿತ್ರದಲ್ಲಿ ನನ್ನನ್ನು ಬ್ಯಾಸ್ಕೆಟ್‍ಬಾಲ್ ಆಟಗಾರನಾಗಿ ತೋರಿಸಿದ್ದಾರೆ. ಅದಕ್ಕೆ ನಾನು ತಯಾರಿ ನಡೆಸಿದ್ದೆ. ಚಿತ್ರದಲ್ಲಿ ಕ್ಯಾಮೆರಾಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಂಡರು ಎನ್ನುವ ನಿಖಿಲ್, ರೈಡರ್ ಅನ್ನೋದು ಪ್ರೀತಿಯ ಸವಾರಿ ಅಂತಾರೆ.
ಚಿತ್ರದಲ್ಲಿ ಲವ್ ಸೀಕ್ವೆನ್ಸ್‍ಗಳು ನನ್ನ ಕ್ಯಾರೆಕ್ಟರ್‍ಗೂ ಹತ್ತಿರವಿರೋದ್ರಿಂದ ಅದು ಸಲೀಸಾಯ್ತು. ಚಿತ್ರದ ಮೇಲೆ ನಿರೀಕ್ಷೆಯೂ ಇದೆ. ವಿಜಯ್ ಕುಮಾರ್ ಕೊಂಡ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ ಎನ್ನುವ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದಾರೆ.
ನಿಖಿಲ್ ನಿರೀಕ್ಷೆ ಹೆಚ್ಚಿಸಿರೋದು ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಸಿಕ್ಕಿರೋ ರೆಸ್ಪಾನ್ಸ್. ಟ್ರೇಲರ್‍ನ್ನು ಸರಿಸುಮಾರು 70 ಲಕ್ಷ ಮಂದಿ ನೋಡಿದ್ದರೆ, ಒಂದೊಂದು ಹಾಡನ್ನೂ 40 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಮೆಚ್ಚಿದ್ದಾರೆ. ಹೀಗಾಗಿ ಚಿತ್ರದ ಮೇಲೆ ನಿಖಿಲ್ ಕುಮಾರಸ್ವಾಮಿ ಆಶಾಭಾವನೆ ಇಟ್ಟುಕೊಂಡಿದ್ದಾರೆ.