` ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ?
Ajai Rao Image

ಲವ್ ಯೂ ರಚ್ಚು, ಈ ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ. ಟ್ರೇಲರ್ ಮತ್ತು ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿರೋದ್ರಿಂದ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗೋ ಎಲ್ಲ ನಿರೀಕ್ಷೆಗಳೂ ಇವೆ. ಇದರ ನಡುವೆ ಚಿತ್ರದ ನಿರ್ಮಾಪಕರು ಮತ್ತು ಹೀರೋ ನಡುವೆ ಗುದ್ದಾಟ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಧ್ರುವ ಸರ್ಜಾ ರಿಲೀಸ್ ಮಾಡಿದ್ದರು. ಆದರೆ, ಕಾರ್ಯಕ್ರಮಕ್ಕೆ ಹೀರೋ ಅಜಯ್ ರಾವ್ ಅವರೇ ಇರಲಿಲ್ಲ. ಚಿತ್ರತಂಡದ ಸ್ಪಷ್ಟನೆಗಳು ಗೊಂದಲ ಹುಟ್ಟಿಸಿದ್ದವು.

ನನಗೆ ಚಿತ್ರದ ನಿರ್ಮಾಪಕರಿಂದ ಅವಮಾನವಾಗಿದೆ. ನನಗೂ ಆತ್ಮಗೌರವ ಇದೆ. ಹೀಗಾಗಿ ಚಿತ್ರತಂಡದವರ ಜೊತೆ, ನಿರ್ಮಾಪಕರ ಜೊತೆ ನಾನು ಪ್ರಚಾರ ಮಾಡಲ್ಲ. ವೈಯಕ್ತಿಕವಾಗಿ ಚಿತ್ರದ ಬಗ್ಗೆ ಪ್ರಚಾರ ಮಾಡ್ತೇನೆ. ಅವಮಾನವಾಗಿರೋ ಜಾಗಕ್ಕೆ ಮತ್ತೆ ನಾನು ಹೋಗಲ್ಲ ಎಂದಿರುವ ಅಜಯ್ ರಾವ್, ಯಾವ ಕಾರಣಕ್ಕೆ ಇದೆಲ್ಲ ಶುರುವಾಯ್ತು ಅನ್ನೋದನ್ನ ಬಹಿರಂಗಪಡಿಸುವುದಿಲ್ಲವಂತೆ. ಅದರ ಬಗ್ಗೆ ಮುಂದೆ ಕೂಡಾ ಮಾತನಾಡಲ್ಲ ಎಂದಿದ್ದಾರೆ ಹೀರೋ.

ವೈಮನಸ್ಯ, ಮನಸ್ತಾಪ ಇರುತ್ತೆ. ಆದರೆ ಅವಮಾನ ಮಾಡಿಲ್ಲ. 4 ಜನ ಇರೋ ಕುಟುಂಬದಲ್ಲೇ ಮನಸ್ತಾಪ ಬರುತ್ತೆ, 150 ಜನರ ತಂಡ ಇರೋವಾಗ ಬರೋದಿಲ್ವೇ? ಕೂತು ಮಾತನಾಡಿ, ವಿವಾದ ಬಗೆಹರಿಸಿಕೊಳ್ಳೋಕೆ ನಾನು ಸಿದ್ಧ. 25ನೇ ತಾರೀಕು ಪ್ರೆಸ್‍ಮೀಟ್ ಇದೆ. 29ರಂದು ಈವೆಂಟ್ ಇದೆ. ಅಜಯ್ ರಾವ್ ಅವರಿಗೆ ನಾನೇ ಖುದ್ದು ಫೋನ್ ಮಾಡಿ ಕರೆದಿದ್ದೇನೆ ಎಂದಿದ್ದಾರೆ ನಿರ್ಮಾಪಕ, ಕ್ರಿಯೇಟಿವ್ ಡೈರೆಕ್ಟರ್ ಗುರು ದೇಶಪಾಂಡೆ.

ಇಡೀ ಚಿತ್ರತಂಡವೇ ಒಂದು ಮಾತು ಹೇಳ್ತಿರೋವಾಗ, ಒಂದು ನಿರ್ಣಯದ ಮೇಲೆ ನಿಂತಿರೋವಾಗ ಇವರೊಬ್ಬರೇ ಒಂದು ಮಾತು ಹೇಳ್ತಿದ್ದರೆ ಅದು ಸರಿಹೋಗಲ್ಲ. ಅದು ಅವರ ಸಂಸ್ಕøತಿಯನ್ನು ತೋರಿಸುತ್ತೆ ಎಂದಿದ್ದಾರೆ ಗುರು ದೇಶಪಾಂಡೆ.