ಆ ಭವ್ಯ ಇತಿಹಾಸ ಸೃಷ್ಟಿಯಾಗಿ 3 ವರ್ಷ. ಸರಿಯಾಗಿ 3 ವರ್ಷಗಳ ಹಿಂದೆ.. 2018ರ ಡಿಸೆಂಬರ್ 21ರಂದು ಕೆಜಿಎಫ್ ರಿಲೀಸ್ ಆಗಿತ್ತು. ಕಡೆಯ ಕ್ಷಣದಲ್ಲಿ ಯಾರೋ ಒಬ್ಬರು ಕೋರ್ಟಿಗೆ ಹೋಗಿ ಕೊನೆ ಕ್ಷಣದಲ್ಲಿ ಸಿನಿಮಾಗೆ ತಡೆ ತರುವ ಪ್ರಯತ್ನವೂ ನಡೆದು ಗೊಂದಲ ಸೃಷ್ಟಿಯಾದರೂ.. ಅದನ್ನು ಎದುರಿಸಿ, ನಿಭಾಯಿಸಿದ ಹೊಂಬಾಳೆ ಚಿತ್ರವನ್ನು ಪ್ರೇಕ್ಷಕರ ಎದುರು ತಂದಿತ್ತು. ನಂತರ ಸೃಷ್ಟಿಯಾಗಿದ್ದು ಇತಿಹಾಸ.
ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಹೀರೋ ಆದರು. ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆದರು. ಹೊಂಬಾಳೆ ಸಂಸ್ಥೆಗೆ ದೇಶದೆಲ್ಲೆಡೆ ಹೆಸರು ಬಂತು.
ಆ ಸಂಭ್ರಮವನ್ನು ಹೊಂಬಾಳೆ ನೆನಪಿಸಿಕೊಂಡಿದೆ. ಈಗ ಕೆಜಿಎಫ್ 2 ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಜುಲೈ 14ಕ್ಕೆ ರಿಲೀಸ್ ಆಗುತ್ತಿದೆ ಕೆಜಿಎಫ್ ಚಾಪ್ಟರ್ 2.