ಪ್ರೇಮಂ ಪೂಜ್ಯಂ. ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ. ವೈದ್ಯ ಜಗತ್ತಿನ ಅದ್ಭುತ ಪ್ರೇಮಿಗಳ ವಿಭಿನ್ನ ಕಥೆ ಹೇಳಿದ್ದ ಡಾ.ರಾಘವೇಂದ್ರ, ಈಗ ಚಿತ್ರದ ಸೀಕ್ವೆಲ್‍ಗೆ ಕೈ ಹಾಕಿದ್ದಾರೆ. ಪ್ರೇಮಂ ಪೂಜ್ಯಂ 2 ಸಿದ್ಧವಾಗುತ್ತಿದೆ.
ಅದೇ ಪ್ರೇಮ್, ಅದೇ ಬೃಂದಾ ಆಚಾರ್ಯ, ಅದೇ ಡೈರೆಕ್ಟರ್. ಅಧಿಕೃತವಾಗಿ ಶುರುವಾಗುತ್ತಿರೋದು ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು. ಪ್ರೇಮಂ ಪೂಜ್ಯಂ ದುರಂತ ಅಂತ್ಯದ ಸಿನಿಮಾ. ಈಗ ಅದೇ ಜೋಡಿಯನ್ನಿಟ್ಟುಕೊಂಡು ಸೀಕ್ವೆಲ್ ಹೇಗೆ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.