ರಾಹುಲ್ ದ್ರಾವಿಡ್, ಭಾರತೀಯ ಕ್ರಿಕೆಟ್‍ನ ದಂತಕಥೆಗಳಲ್ಲೊಬ್ಬರು. ಕಿಚ್ಚ ಸುದೀಪ್ ಕ್ರಿಕೆಟ್ ಪ್ರೇಮಿ. ಆಟಗಾರ ಹಾಗೂ ದ್ರಾವಿಡ್ ಪಾತ್ರ ಮಾಡುವ ಆಸೆಯಿಟ್ಟುಕೊಂಡಿರೋ ಕಲಾವಿದ. 83 ಸಿನಿಮಾ ಕನ್ನಡದಲ್ಲಿ ಬರುತ್ತಿರೋವಾಗ ದ್ರಾವಿಡ್ ಬಯೋಪಿಕ್ ವಿಚಾರ ಹಾಗೂ ಸುದೀಪ್ ಆಸೆಯ ಪ್ರಶ್ನೆ ರಪ್ಪನೆ ತೂರಿಬಂತು.
``ನಟಿಸೋಕೆ ನಾನ್ ರೆಡಿ. ನಿರ್ದೇಶಕ ಕಬೀರ್ ಖಾನ್ ಇಲ್ಲಿಯೇ ಇದ್ದಾರೆ. ಅವರನ್ನೇ ಕೇಳಿ. ನಾನಂತೂ ರೆಡಿ'' ಎಂದರು ಸುದೀಪ್.
83 ಹೀರೋ ರಣ್‍ವೀರ್ ಸಿಂಗ್ ``ಹೀರೋ ಇಲ್ಲಿಯೇ ಇದ್ದಾರೆ. ಡೈರೆಕ್ಟರ್ ಇಲ್ಲಿಯೇ ಇದ್ದಾರೆ. ಪ್ರೊಡ್ಯೂಸರುಗಳೂ ಇಲ್ಲಿಯೇ ಇದ್ದಾರೆ. ಇನ್ನೇಕೆ ತಡ... ''ಎನ್ನುತ್ತಿದ್ದಂತೆ ಕಬೀರ್ ಖಾನ್ ಯೆಸ್ ಎಂದೇ ಬಿಟ್ಟರು. ಹಕ್ಕು ತಂದುಕೊಡೋ ಜವಾಬ್ದಾರಿಯನ್ನು ಮಾತ್ರ ಸುದೀಪ್ ಹೆಗಲಿಗೇ ವರ್ಗಾಯಿಸಿದ್ರು.
83 ಚಿತ್ರದ ಪ್ರೀಇವೆಂಟ್ ಶೋನಲ್ಲಿ ಇಷ್ಟೆಲ್ಲ ನಡೆಯಿತು. 83 ಸಿನಿಮಾ ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ.