ನಾನು ರೈಡರ್ ಸಿನಿಮಾ ಶುರು ಮಾಡಿ ನಿಖಿಲ್ ಕುಮಾರಸ್ವಾಮಿ ಅವರ ಆಯ್ಕೆ ಆದ ಮೇಲೆ ಅವರು ಕರ್ನಾಟಕದ ತುಂಬಾ ದೊಡ್ಡ ಕುಟುಂಬದವರಿಂದ ಬಂದವರೆಂದು ತಿಳಿದುಕೊಂಡೆ. ಅವರ ಹಿನ್ನೆಲೆಯೂ ಆಗಲೇ ಗೊತ್ತಾಗಿದ್ದು. ಆದರೆ.. ನಿಖಿಲ್ ಅವರಿಗೆ ಡೈರೆಕ್ಷನ್ ಹೇಳುತ್ತಾ ಹೋದಂತೆ.. ನಿಖಿಲ್ ಡೈರೆಕ್ಟರ್ ಆ್ಯಕ್ಟರ್ ಅನ್ನೋದು ಅರ್ಥವಾಗುತ್ತಾ ಹೋಯ್ತು. ನಿಖಿಲ್ ಇಡೀ ತಂಡದ ಜೊತೆ ಸುಲಭವಾಗಿ ಬೆರೆಯುವ, ನಿರ್ದೇಶಕರು ಹಾಗೂ ಇಡೀ ತಂಡ ಓಕೆ ಎನ್ನುವವರೆಗೆ ಶ್ರಮವಹಿಸುವ ಕಲಾವಿದ ಅನ್ನೋದು ಗೊತ್ತಾಯ್ತು.
ಹೀಗೆ ಹೇಳುತ್ತಾ ಹೋಗ್ತಾರೆ ನಿರ್ದೇಶಕ ವಿಜಯ್ ಕುಮಾರ್ ಕೊಂಡ. ನಿಖಿಲ್ ಬಗ್ಗೆ ವಿಶೇಷ ಪ್ರೀತಿಯೂ ಇದೆ. ಈ ಚಿತ್ರದ ಮೂಲಕ ವಿಜಯ್ ಕುಮಾರ್ ಕೊಂಡ ಕನ್ನಡಕ್ಕೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.
ನಿಖಿಲ್ ಎದುರು ಕಾಶ್ಮೀರ ಪರದೇಸಿ, ಸಂಪದಾ ಹುಲಿವಾನ, ಚಿಕ್ಕಣ್ಣ, ದತ್ತಣ್ಣ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ.
ನಾನೀಗ ಎಕ್ಸಾಂ ಬರೆದು ರಿಸಲ್ಟ್‍ಗೆ ಕಾಯುತ್ತಿರೋ ವಿದ್ಯಾರ್ಥಿಯಂತಿದ್ದೇನೆ. ಆದರೆ, ಸಕ್ಸಸ್ ಆಗುತ್ತೇನೆ ಅನ್ನೋ ಕಾನ್ಫಿಡೆನ್ಸ್ ಇದೆ ಅಂತಾರೆ ಡೈರೆಕ್ಟರ್ ವಿಜಯ್ ಕುಮಾರ್ ಕೊಂಡ.