ನಿನ್ನಾ ನೋಡಲೆಂದು ನನ್ನಾ ಎದೆಯಲಿ ಢವಾಢವಾ.. ಢವಾಢವಾ..
ರೈಡರ್ ಚಿತ್ರದ ಹಿಟ್ ಸಾಂಗ್ ಇದು. ಸಿನಿಮಾದಲ್ಲಿ ಮುದ್ದು ಕಾಶ್ಮೀರ ಪರದೇಶಿಗಾಗಿ ನಿಖಿಲ್ ಹಾಡಿ ಕುಣಿದಿದ್ದಾರೆ. ರಿಯಲ್ ಲೈಫ್‍ನಲ್ಲಿ ಪತ್ನಿ ರೇವತಿಗಾಗಿ ಅದೇ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ತಮ್ಮದೇ ಮನೆಯ ಟೆರೇಸ್‍ನಲ್ಲಿ ಪತ್ನಿ ಜೊತೆ ಢವಢವ ಸ್ಟೆಪ್ ಹಾಕುತ್ತಿರೋ ಪುಟ್ಟ ವಿಡಿಯೋವೊಂದನ್ನು ನಿಖಿಲ್ ಹಂಚಿಕೊಂಡಿದ್ದಾರೆ.
ಇತ್ತ ರೈಡರ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ನಿಖಿಲ್ ಅಭಿನಯದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ, ಚಂದ್ರು ಮನೋಹರನ್ ಮತ್ತು ಸುನಿಲ್ ಗೌಡ ನಿರ್ಮಾಣದ ರೈಡರ್ ಮುಂದಿನ ವಾರ ರಿಲೀಸ್ ಆಗುತ್ತಿದೆ.