2022ರ ಮೆಗಾ ಸಿನಿಮಾ ಆಗಲಿರುವ ಕಬ್ಜ ಚಿತ್ರದ ಚಿತ್ರೀಕರಣ ಜಬರ್‍ದಸ್ತಾಗಿ ನಡೆಯುತ್ತಿದೆ. ಆರ್. ಚಂದ್ರು, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‍ನಲ್ಲಿ ಬರುತ್ತಿರೋ ಕಬ್ಜ ಚಿತ್ರದ ಚಿತ್ರೀಕರಣಕ್ಕೀಗ ಭಾರ್ಗವ್ ಭಕ್ಷಿ ಎಂಟ್ರಿ ಕೊಟ್ಟಿದ್ದಾರೆ.
ಅಂಡರ್‍ವಲ್ರ್ಡ್ ಕಥೆಯಿರೋ ಕಬ್ಜದಲ್ಲಿ ಸುದೀಪ್, ಭಾರ್ಗವ್ ಭಕ್ಷಿ ಪಾತ್ರ ಮಾಡುತ್ತಿದ್ದಾರೆ. ಭಾರ್ಗವ್ ಭಕ್ಷಿ ಕೂಡಾ ಭೂಗತ ದೊರೆ. ಅತ್ತ ಉಪ್ಪಿಯದ್ದೂ ಭೂಗತ ದೊರೆಯ ಪಾತ್ರ. ಹಾಗಾದರೆ ಕಥೆಯಲ್ಲಿ ಉಪ್ಪಿ ಮತ್ತು ಕಿಚ್ಚನ ಪಾತ್ರಗಳು ಮುಖಾಮುಖಿಯಾಗುತ್ತವಾ? ಆ ಕುತೂಹಲವನ್ನು ಚಿತ್ರ ಬಿಡುಗಡೆಯವರೆಗೂ ಹಾಗೆಯೇ ಉಳಿಸಿಕೊಳ್ಳಲಿದ್ದಾರೆ ಆರ್.ಚಂದ್ರು.
ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಆರ್.ಚಂದ್ರು ಅವರೇ ನಿರ್ಮಾಪಕರು. ರವಿ ಬಸ್ರೂರು ಮ್ಯೂಸಿಕ್ ಇದ್ದು, ರವಿವರ್ಮ, ವಿಕ್ರಂಮೋರ್, ವಿಜಯ್ ಮತ್ತು ಪೀಟರ್‍ಹೆನ್ ಅಂತಹಾ ಘಟಾನುಘಟಿಗಳ ಸಾಹಸ ನಿರ್ದೇಶನವಿದೆ. ಸುದೀಪ್, ಉಪ್ಪಿ ಅಷ್ಟೇ ಅಲ್ಲದೆ ಚಿತ್ರದಲ್ಲಿ ಜಗಪತಿ ಬಾಬು, ನವಾಬ್ ಶಾ, ರಾಹುಲ್ ದೇವ್, ಪ್ರಮೋದ್ ಶೆಟ್ಟಿ, ಲಕ್ಕಿ ಲಕ್ಷ್ಮಣ್, ಕೋಟ ಶ್ರೀನಿವಾಸ್, ಜಯಪ್ರಕಾಶ್.. ಹೀಗೆ ಘಟಾನುಘಟಿ ಕಲಾವಿದರೇ ಚಿತ್ರವನ್ನು ತುಂಬಿಕೊಂಡಿದ್ದಾರೆ.