ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿಖಿಲ್ ಕುಮಾರಸ್ವಾಮಿ ನಟಿಸಿರೋ ರೈಡರ್ ಚಿತ್ರದ ವಿತರಣೆಯ ಹಕ್ಕು ಹೊತ್ತುಕೊಂಡಿದೆ. ಹಲವಾರು ಕನಸುಗಳನ್ನಿಟ್ಟುಕೊಂಡು ಚಿತ್ರರಂಗಕ್ಕೆ ಬಂದಿರೋ ಕೆವಿಎನ್ ಈಗ ಆರ್‍ಆರ್‍ಆರ್ ಮತ್ತು ವಿಕ್ರಾಂತ್ ರೋಣ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಈಗ ನಿಖಿಲ್ ಅವರ ರೈಡರ್ ಚಿತ್ರವನ್ನೂ ವಿತರಿಸುವ ಜವಾಬ್ದಾರಿ ಹೊತ್ತಿದೆ.
ನಿಖಿಲ್ ಎದುರು ಕಾಶ್ಮೀರಾ ಪರದೇಸಿ ನಾಯಕಿಯಾಗಿ ನಟಿಸಿದ್ದು, ವಿಜಯ್ ಕುಮಾರ್ ಕೊಂಡ ನಿರ್ದೇಶಕ. ಅನುಷಾ ರೈ ಇನ್ನೊಬ್ಬ ನಾಯಕಿ. ಚಿತ್ರದಲ್ಲಿ ನಿಖಿಲ್ ಅವರದ್ದು ಬ್ಯಾಸ್ಕೆಟ್‍ಬಾಲ್ ಆಟಗಾರನ ಪಾತ್ರ.