` ಮದಗಜ : 25 ಕೋಟಿ ಬಂಡವಾಳ.. 50 ಕೋಟಿ ಬಿಸಿನೆಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮದಗಜ : 25 ಕೋಟಿ ಬಂಡವಾಳ.. 50 ಕೋಟಿ ಬಿಸಿನೆಸ್
Madagaja Movie Image

ಮದಗಜ. ಶ್ರೀಮುರಳಿ, ಅಶಿಕಾ ರಂಗನಾಥ್, ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಕಾಂಬಿನೇಷನ್‍ನಲ್ಲಿ ಬಂದ ಸಿನಿಮಾ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಎಂದಿನಂತೆ ಭರ್ಜರಿ ಬಂಡವಾಳ ಹೂಡಿದ್ದರು. ಸಿನಿಮಾ ರಿಲೀಸ್ ಆಗಿ ಚಿತ್ರತಂಡ ವಿಜಯಯಾತ್ರೆ ಆಚರಿಸಿದೆ. ಶ್ರೀಮುರಳಿ ನೇತೃತ್ವದಲ್ಲಿ ಚಿತ್ರತಂಡ ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಬೇಲೂರು, ಹಾಸನ, ಕುಣಿಗಲ್ ಹಾಗೂ ತುಮಕೂರಿನಲ್ಲಿ ಮದಗಜ ಶೋ ನಡೆಯುತ್ತಿದ್ದ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ವಿಜಯಯಾತ್ರೆಯಲ್ಲಿ ಶ್ರೀಮುರಳಿ ಜೊತೆ ಮಹೇಶ್ ಕುಮಾರ್, ಗರುಡ ರಾಮ್ ಕೂಡಾ ಜೊತೆಯಲ್ಲಿದ್ದರು.

ಚಿತ್ರಕ್ಕೆ ಸುಮಾರು 25 ಕೋಟಿ ಬಂಡವಾಳ ಹಾಕಲಾಗಿತ್ತು. ಚಿತ್ರವೀಗ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಚಿತ್ರಮಂದಿರಗಳಿಂದಲೇ ಚಿತ್ರಕ್ಕೆ ಹೂಡಿದ್ದ ಬಂಡವಾಳ ಆಲ್‍ಮೋಸ್ಟ್ ಬಂದಿದೆ. ಹಿಂದಿ ಡಬ್ಬಿಂಗ್ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಆಡಿಯೋ, ತೆಲುಗು, ತಮಿಳು ಕಲೆಕ್ಷನ್ ಎಲ್ಲ ಸೇರಿ ಚಿತ್ರ ಈಗಾಗಲೇ 50 ಕೋಟಿ ಬಿಸಿನೆಸ್ ಮಾಡಿದೆ ಅನ್ನೋ ಸುದ್ದಿ ಇದೆ. ಮದಗಜ ಮಸ್ತ್ ಆಗಿಯೇ ಗೆದ್ದಾಗಿದೆ.