ಅವನಿಗೆ ಫ್ರೆಂಡ್ಸು ಮತ್ತು ಡ್ರಿಂಕ್ಸು ಎರಡೇ ವೀಕ್‍ನೆಸ್ಸು. ಕುಡಿಯುವ ಮೊದಲು ಅಮಾಯಕ. ಕುಡಿದ ಮೇಲೆ ಅಮ್ಮ ಅಕ್ಕ.. ಅವನಿಗೊಬ್ಬಳು ಪ್ರೇಯಸಿ. ಆದರೆ, ಅವನ ಫ್ರೆಂಡ್ಸ್ ಅಂದ್ರೆ ಅವಳಿಗೆ ಅಲರ್ಜಿ.
ಮಧ್ಯೆ ಅಪ್ಪ ಅಮ್ಮ ಪದೇ ಪದೇ ಜವಾಬ್ದಾರಿ ಬಗ್ಗೆ ಪಾಠ ಮಾಡುತ್ತಾರೆ. ಅದರೊಳಗೆ ಒಂದಷ್ಟು ನಡುರೋಡಿನ ಫೈಟುಗಳಿವೆ.ಸಣ್ಣ ಸಣ್ಣ ದೃಶ್ಯಗಳಲ್ಲೇ ಕಚಗುಳಿಯಿಡುತ್ತಾ.. ಸಂಕಟವನ್ನೂ ಹುಟ್ಟಿಸುತ್ತಾ.. ಭಾವುಕರನ್ನಾಗಿಸುತ್ತಾ ಹೋಗುವ ಟ್ರೇಲರ್ ಸ್ಟೋರಿ ಇದು. ಬಡವ ರ್ಯಾಸ್ಕಲ್.
ಇದೇ ಕ್ರಿಸ್‍ಮಸ್ಸಿಗೆ ರಿಲೀಸ್ ಆಗುತ್ತಿರೋ ಬಡವ ರಾ'್ಯಸ್ಕಲ್ ಸಿನಿಮಾದ ಟ್ರೇಲರ್ ಡಾಲಿ ಧನಂಜಯ್ ಅವರನ್ನು ಹೊಸ ಅವತಾರದಲ್ಲಿ ತೋರಿಸುವ ಪ್ರಯತ್ನ ಮಾಡಿದೆ. ಗೆಲ್ಲುವ ಸುಳಿವನ್ನೂ ಕೊಟ್ಟಿದೆ.
ಕಥೆ.. ಚಿತ್ರಕಥೆ.. ಸಂಭಾಷಣೆ.. ಮತ್ತು ನಿರ್ದೇಶನ ಎಲ್ಲವನ್ನೂ ಹೊತ್ತುಕೊಂಡಿರೋ ಶಂಕರ್ ಗುರು ಟ್ರೇಲರ್‍ನ್ನು ಸಖತ್ತಾಗಿಯೇ ಮಾಡಿದ್ದಾರೆ. ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು ಮತ್ತು ತಾರಾ ಜೋಡಿ ಕೆಮಿಸ್ಟ್ರಿಯೂ ಚೆನ್ನಾಗಿದೆ. ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಾಣದ ಚಿತ್ರ ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ.