ಡಾರ್ಲಿಂಗ್ ಕೃಷ್ಣ ಹೀರೋ ಆಗುವುದಕ್ಕೆ ಮೊದಲಿನಿಂದಲೂ ಪುನೀತ್ ಅವರ ಅಭಿಮಾನಿ. ಆರಂಭದ ದಿನಗಳಲ್ಲಿ ಪುನೀತ್ ಅವರಿಂದ ಬೆನ್ನು ತಟ್ಟಿಸಿಕೊಂಡಿದ್ದ ಕೃಷ್ಣ ಜೊತೆಗೆ ಪುನೀತ್ ಇತ್ತೀಚೆಗೆ ನಟಿಸಿದ್ದರು. ಕೃಷ್ಣ ಅವರ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ದೇವರ ಪಾತ್ರದಲ್ಲಿ ನಟಿಸಿದ್ದು, ಪ್ರಭುದೇವ ಜೊತೆ ಡ್ಯಾನ್ಸ್ ಕೂಡಾ ಮಾಡಿದ್ದಾರೆ.
ಇತ್ತೀಚೆಗೆ ಆ ಚಿತ್ರದ ಡಬ್ಬಿಂಗ್ ಮುಗಿಸಿದ ಕೃಷ್ಣ ಅವರಿಗೆ ಡಬ್ಬಿಂಗ್ ಮಾಡುವಾಗ ಬಹಳ ಕಷ್ಟವಾಯಿತಂತೆ. ಅಪ್ಪು ಸರ್ ಜೊತೆಗಿನ ಶೂಟಿಂಗ್ ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇದು ನನಗೆ ಎಂದೆಂದಿಗೂ ವಿಶೇಷ. ಡಬ್ಬಿಂಗ್ ಮಾಡುವಾಗ ತುಂಬಾ ಕಷ್ಟವಾಯಿತು ಎಂದು ಹೇಳಿದ್ದಾರೆ ಕೃಷ್ಣ.
ಲಕ್ಕಿ ಮ್ಯಾನ್, ತಮಿಳಿನ ಓ ಮೈ ಕಡವಳೆ ಚಿತ್ರದ ರೀಮೇಕ್. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಇಲ್ಲಿ ಪುನೀತ್ ಮಾಡಿದ್ದಾರೆ. ಕಷ್ಟದಲ್ಲಿರೋ ನಾಯಕನಿಗೆ ಸಹಾಯ ಮಾಡುವ ದೇವರ ಪಾತ್ರ ಪುನೀತ್ ಅವರದ್ದು.