ರಾಜಕುಮಾರ ಮತ್ತು ಯುವರತ್ನ ಚಿತ್ರಗಳ ನಂತರ ಮತ್ತೊಮ್ಮೆ ಸಂತೋಷ್ ಆನಂದರಾಮ್ ಮತ್ತು ಪುನೀತ್ ಒಟ್ಟಿಗೇ ಮಾಡಬೇಕಿದ್ದ ಕಥೆ ಅದು. ಕಥೆ ಪುನೀತ್‍ಗೆ ಇಷ್ಟವಾಗಿತ್ತು. ಸಂತೋಷ್ ಆನಂದರಾಮ್, ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮುಗಿಸಿದ ನಂತರ ಇದು ಸೆಟ್ಟೇರಬೇಕಿತ್ತು. ಪುನೀತ್ ಅವರ ಹಲವು ಚಿತ್ರಗಳಂತೆಯೇ ಇದೂ ಕೂಡಾ ಸ್ಥಗಿತಗೊಂಡಿತ್ತು. ಈಗ ಆ ಕಥೆಯನ್ನು ಪುನೀತ್ ಅವರ ಮುದ್ದಿನ ಹುಡುಗ ಯುವರಾಜ್ ಅವರಿಗಾಗಿ ಮಾಡೋಕೆ ಸಂತೋಷ್ ಆನಂದರಾಮ್ ಮುಂದಾಗಿದ್ದಾರಂತೆ.
ಯುವರಾಜ್, ರಾಘವೇಂದ್ರ ರಾಜ್‍ಕುಮಾರ್ ಅವರ ಮಗ. ವಿನಯ್ ಅವರ ತಮ್ಮ. ನಟಸಾರ್ವಭೌಮ ಚಿತ್ರದ ಈವೆಂಟ್‍ನಲ್ಲಿ ಅದ್ಭುತ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದರು. ಐತಿಹಾಸಿಕ ಪಾತ್ರವೊಂದರ ಟ್ರೇಲರ್ ಕೂಡಾ ರಿಲೀಸ್ ಆಗಿತ್ತು. ವ್ಹಾವ್ ಎನಿಸಿತ್ತು. ಅವರೇ ಈಗ ಅಪ್ಪು ಒಪ್ಪಿದ್ದ ಕಥೆಯ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ನಿರ್ಮಾಪಕರು ಯಾರು ಅನ್ನೋದು ಫೈನಲ್ ಆಗಿಲ್ಲ. ಪುನೀತ್ ಜೊತೆಗಿನ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕರಾಗಬೇಕಿತ್ತು. ಈಗ ಹೊಂಬಾಳೆಯೋ, ಪಿಆರ್‍ಕೆಯೋ ಖಚಿತವಿಲ್ಲ. ಜನವರಿ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.