ರಾಗಿಣಿ ದ್ವಿವೇದಿ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ. ಚಿತ್ರದ ಟೈಟಲ್ ಶೀಲಾ. ಈ ಚಿತ್ರ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಮಲಯಾಳಂ ಮತ್ತು ಕನ್ನಡ ಎರಡರಲ್ಲೂ ರಾಗಿಣಿಯೇ ನಾಯಕಿ. ರಾಗಿಣಿಗೆ ಮಲಯಾಳಂ ಚಿತ್ರರಂಗ ಹೊಸದಲ್ಲ. ಈ ಹಿಂದೆ ಕೆಲ ಚಿತ್ರಗಳಲ್ಲಿ ನಟಿಸಿರೋ ರಾಗಿಣಿ, ಈ ಬಾರಿ ಶೀಲಾ ಚಿತ್ರಕ್ಕೆ ಓಕೆ ಎಂದಿದ್ದಾರೆ.
ಶೀಲಾ ಪಾತ್ರವನ್ನೇ ನಾನು ಮಾಡುತ್ತಿರೋದು. ಆಕೆ ಒಬ್ಬ ವಿಧವೆ. ಬೋಲ್ಡ್. ಒರಟುತನ ಎಲ್ಲವೂ ಇರೋ ಪಾತ್ರವದು. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ ಎಂದಿದ್ದಾರೆ ರಾಗಿಣಿ.
ಮಲಯಾಳಂನ ಖ್ಯಾತ ನಿರ್ದೇಶಕ ಬಾಲು ನಾರಾಯಣ್ ಶೀಲಾ ಚಿತ್ರದ ಡೈರೆಕ್ಟರ್. ಕೇರಳದ ಸುಮಾರು 200 ವರ್ಷ ಹಳೆಯ ಕಾಫಿ ಎಸ್ಟೇಟ್‍ನಲ್ಲಿ ಚಿತ್ರೀಕರಣ ಶುರುವಾಗಿದೆ.