ನಿಖಿಲ್ ಕುಮಾರಸ್ವಾಮಿ ಅಭಿನಯದ ಸಿನಿಮಾ ರೈಡರ್ ರಿಲೀಸ್ ಡೇಟ್ ಕ್ರಿಸ್‍ಮಸ್‍ಗೆ ಫಿಕ್ಸ್ ಆಗಿದೆ. ಡಿ.24ಕ್ಕೆ ರಿಲೀಸ್ ಆಗಲಿರೋ ಚಿತ್ರದ ಟ್ರೇಲರ್ ಸಿನಿಮಾ ರಿಲೀಸ್ ಆಗುವುದಕ್ಕೆ ಒಂದು ವಾರ ಮೊದಲು ಅಂದರೆ ಡಿಸೆಂಬರ್ 16ರಂದು ರಿಲೀಸ್ ಆಗಲಿದೆ. ಆ ದಿನ ಸಂಜೆ 6 ಗಂಟೆ 54 ನಿಮಿಷಕ್ಕೆ ಟ್ರೇಲರ್ ಬಿಡುಗಡೆ ಆಗುತ್ತಿದೆ.
ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಚಿತ್ರದಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರನ ಲವ್ ಸ್ಟೋರಿ ಮತ್ತು ಆ್ಯಕ್ಷನ್ ಥ್ರಿಲ್ಲರ್ ಇದೆ. ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು, ಲಹರಿ ಫಿಲ್ಮ್ಸ್ ಮತ್ತು ಶಿವನಂದಿ ಎಂಟರ್‍ಟೈನ್‍ಮೆಂಟ್ಸ್ ಜಂಟಿಯಾಗಿ ನಿರ್ಮಿಸಿರೋ ಚಿತ್ರ ರೈಡರ್. ಚಂದ್ರು ಮನೋಹರ್ ಮತ್ತು ಸುನಿಲ್ ಗೌಡ ನಿರ್ಮಾಪಕರು. ಅರ್ಜುನ್ ಜನ್ಯ ನಿರ್ದೇಶನದಲ್ಲಿ ರಿಲೀಸ್ ಆಗಿರುವ ಹಾಡುಗಳು ಈಗಾಗಲೇ ಹಿಟ್ ಸಾಲಿಗೆ ಸೇರಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.