` ಮಿಲ್ಕಿ ಬ್ಯೂಟಿ ಅಶಿಕಾ ಬೆನ್ನು ಕೆಂಪಾಗಿದ್ದೇಕೆ ಮದಗಜ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಮಿಲ್ಕಿ ಬ್ಯೂಟಿ ಅಶಿಕಾ ಬೆನ್ನು ಕೆಂಪಾಗಿದ್ದೇಕೆ ಮದಗಜ..?
ಮಿಲ್ಕಿ ಬ್ಯೂಟಿ ಅಶಿಕಾ ಬೆನ್ನು ಕೆಂಪಾಗಿದ್ದೇಕೆ ಮದಗಜ..?

ಕಳೆದ ವಾರ ರಿಲೀಸ್ ಆದ ಮದಗಜ ಹಿಟ್ ಚಿತ್ರಗಳ ಲಿಸ್ಟಿಗೆ ಸೇರಿದ್ದಾಯ್ತು. ಶ್ರೀಮುರಳಿ, ಉಮಾಪತಿ ಶ್ರೀನಿವಾಸ ಗೌಡ ಮತ್ತು ಮಹೇಶ್ ಕುಮಾರ್.. ಮೂವರೂ ಮತ್ತೊಮ್ಮೆ ಗೆದ್ದಿದ್ದಾಯ್ತು. ಹಾಗೆ ಗೆದ್ದಾದ ಮೇಲೆ ಚಿತ್ರದ ನಾಯಕಿ ಅಶಿಕಾ ರಂಗನಾಥ್ ಒಂದು ಫೋಟೋ ಹೊರಬಿಟ್ಟಿದ್ದಾರೆ.

ಅಶಿಕಾ ಮಿಲ್ಕಿ ಬ್ಯೂಟಿ. ಹಾಲಿನ ಕೆನೆ ಮೈಬಣ್ಣದ ಹುಡುಗಿ. ಆದರೆ, ಈ ಫೋಟೋದಲ್ಲಿ ಅವರ ಬೆನ್ನು ಕೆಂಪು ಕೆಂಪಾಗಿ ಹೋಗಿದೆ. ಸನ್ ಬರ್ನ್ ಆಗಿರೋದು ಎದ್ದು ಕಾಣುತ್ತಿದೆ. ಇದೆಲ್ಲ ಮದಗಜ ಕೊಟ್ಟಿದ್ದಂತೆ.

ಚಿತ್ರದ ಪಲ್ಲವಿ ಪಾತ್ರದಲ್ಲಿ ನಟಿಸಿ ಗೆದ್ದ ಹಳ್ಳಿ ಹುಡುಗಿಯಾಗಿ ಮಿಂಚಿದ ಅಶಿಕಾ, ಆ ಪಾತ್ರಕ್ಕೆ ವಹಿಸಿದ್ದ ಶ್ರಮದ ಪ್ರತಿಫಲ ಇದು. ಚಿತ್ರದಲ್ಲಿ ರೈತ ಮಗಳಾಗಿ ಕಳೆ ಕೀಳುವ, ಟ್ರ್ಯಾಕ್ಟರ್ ಓಡಿಸುವ, ಗದ್ದೆ ಉಳುವ ಕೆಲಸಗಳನ್ನೆಲ್ಲ ಮಾಡಿದ್ದಾರೆ ಅಶಿಕಾ. ಅದೆಲ್ಲದರ ರಿಸಲ್ಟ್ ಇದು. ಆದರೆ.. ಅದಕ್ಕಾಗಿ ನನಗೆ ಖುಷಿಯಿದೆ ಎಂದು ಹೇಳಿಕೊಂಡಿದ್ದಾರೆ ಅಶಿಕಾ.