` ಡಿ.10ರಿಂದ ಬಂಧನ 2 ಆರಂಭ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಿ.10ರಿಂದ ಬಂಧನ 2 ಆರಂಭ
ಡಿ.10ರಿಂದ ಬಂಧನ 2 ಆರಂಭ

ವಿಷ್ಣುವರ್ಧನ್, ಸುಹಾಸಿನಿ, ಜೈಜಗದೀಶ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ವೃತ್ತಿ ಜೀವನದ ಮರೆಯಲಾಗದ ಸಿನಿಮಾ ಬಂಧನ. ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನೇ ಬರೆದಿದ್ದ ಚಿತ್ರ. ಆ ಚಿತ್ರದ ಸೀಕ್ವೆಲ್ ಮಾಡೋಕೆ ರಾಜೇಂದ್ರ ಸಿಂಗ್ ಬಾಬು ಸಿದ್ಧರಾಗಿದ್ದಾರೆ ಅನ್ನೋ ಸುದ್ದಿಯಿತ್ತು. ಬಂಧನ 2 ಈಗ ಸೆಟ್ಟೇರುತ್ತಿದೆ. ನಾಳೆ ಅರ್ಥಾತ್ ಡಿಸೆಂಬರ್ 10ರಂದು ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ.

ಸುಹಾಸಿನಿ ಅವರ ಮಗನಾಗಿ ಆದಿತ್ಯ ನಟಿಸುತ್ತಿದ್ದಾರೆ. ಜೈಜಗದೀಶ್, ಸುಧಾರಾಣಿ, ಗುರುರಾಜ್ ಹೊಸಕೋಟೆ, ಸಾಧುಕೋಕಿಲ, ಗೋವಿಂದೇಗೌಡ ನಟಿಸುತ್ತಿರೋ ಚಿತ್ರ ಬಂಧನ 2. ಬಂಧನ 2 ಚಿತ್ರವನ್ನು ವಿಸ್ತರಿಸಿ ಕಥೆ ಬರೆದಿರುವುದು ಅಂಗಡಿ ಶಾಂತಪ್ಪ.

ಸುದೀರ್ಘ ಅವಧಿಯ ನಂತರ ಈ ಚಿತ್ರಕ್ಕೆ ಅಣಜಿ ನಾಗರಾಜ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಚಿತ್ರದ ನಿರ್ಮಾಪಕರೂ ಕೂಡಾ ಅವರೇ.