ವಿಕ್ರಾಂತ್ ರೋಣ. ಸಿನಿಮಾ ಘೋಷಣೆಯಾದಾಗಿನಿಂದ ಥ್ರಿಲ್ ಕೊಡುತ್ತಿರುವ ಸಿನಿಮಾ. ಸ್ವತಃ ಸುದೀಪ್ ಕೂಡಾ ಥ್ರಿಲ್ ಆಗಿರುವ ಚಿತ್ರ ಈಗಾಗಲೇ ದೇಶದಾದ್ಯಂತ ಸದ್ದು ಮಾಡಿದೆ. ಚಿತ್ರದ ಮೇಕಿಂಗ್, ಕಿಚ್ಚನ ಕಾಸ್ಟ್ಯೂಮ್, ಬುರ್ಜ್ ಖಲೀಫಾದಲ್ಲಿ ಪೋಸ್ಟರ್, ಮುಂಬೈನಲ್ಲಿ ಪೋಸ್ಟರ್.. ಹೀಗೆ ಪ್ರತಿ ಹಂತದಲ್ಲೂ ಕ್ರೇಜ್ ಸೃಷ್ಟಿಸಿರೋ ಸಿನಿಮಾ ವಿಕ್ರಾಂತ್ ರೋಣ.
ಈ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡೋಕೆ ಚಿತ್ರತಂಡ ಡೇಟ್ ಫಿಕ್ಸ್ ಮಾಡಿದೆ. ಡಿ.7ಕ್ಕೆ ಡೇಟ್ ಅನೌನ್ಸ್ ಆಗಲಿದೆ. ಬೆಳಗ್ಗೆ 11 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ.
3ಡಿಯಲ್ಲೂ ಬರುತ್ತಿರೋ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಹೀರೋ. ನಿರೂಪ್ ಭಂಡಾರಿ, ನೀತು ಅಶೋಕ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕ. ಶಾಲಿನಿ ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣದ ಸಿನಿಮಾದಲ್ಲಿ ಮಿಲನಾ ನಾಗರಾಜ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.