ಡಿಸೆಂಬರ್ 31. ವರ್ಷದ ಕೊನೆಯ ದಿನ. ಆ ದಿನ ಸ್ಯಾಂಡಲ್‍ವುಡ್ ಹಬ್ಬವನ್ನೇ ಮಾಡುತ್ತಿದೆ. ಒಂದೇ ದಿನ ನಾಲ್ಕಾಲ್ಕು ಚಿತ್ರಗಳು ರಿಲೀಸ್ ಆಗುತ್ತಿವೆ.
ಅಜೇಯ್ ರಾವ್, ರಚಿತಾ ರಾಮ್, ಗುರು ದೇಶಪಾಂಡೆ ಕಾಂಬಿನೇಷನ್ನಿನ ಲವ್ ಯೂ ರಚ್ಚು. ಪದ್ಮನಾಭ್ ದಯಾಳ್, ಲೂಸ್ ಮಾದ ಯೋಗಿ ಕಾಂಬಿನೇಷನ್ನಿನದ ಒಂಬತ್ತನೇ ದಿಕ್ಕು.
ಕೋಟಿ ರಾಮು ನಿರ್ಮಾಣದ ಕೊನೆಯ ಸಿನಿಮಾ, ಪ್ರಜ್ವಲ್ ದೇವರಾಜ್ ನಟಿಸಿರೋ ಅರ್ಜುನ್ ಗೌಡ ಮತ್ತು ದಿಗಂತ್ ನಟನೆಯ ಹುಟ್ಟುಹಬ್ಬದ ಶುಭಾಶಯಗಳು. ಆ ದಿನ ರಿಲೀಸ್ ಆಗುತ್ತಿರೋ ಚಿತ್ರಗಳು. ಅದೇ ದಿನ ರಿಲೀಸ್ ಆಗಬೇಕಿದ್ದ ಚಾರ್ಲಿ 777 ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿರುವ ಹಿನ್ನೆಲೆಯಲ್ಲಿ 4 ಚಿತ್ರಗಳು ಫೈನಲ್ ಆಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು.
ವಿಚಿತ್ರವೆಂದರೆ ಡಿಸೆಂಬರ್ 17ರಂದು ಕನ್ನಡ ಚಿತ್ರಗಳೇ ಇಲ್ಲ. ಆನ ಆ ದಿನ ರಿಲೀಸ್ ಆಗುವ ಸಾಧ್ಯತೆ ಇದೆ. ಆ ದಿನ ತೆಲುಗಿನ ಪುಷ್ಪ ರಿಲೀಸ್ ಆಗುತ್ತಿದೆ. ಆ ತೆಲುಗು ಚಿತ್ರಕ್ಕೆ ಕನ್ನಡದಲ್ಲಿ ಒಂದು ಬಲವಾದ ಎದುರಾಳಿಯೇ ಇಲ್ಲ.