` ಕರ್ನಾಟಕ ರತ್ನ ಪುನೀತ್`ಗೆ ಸಿದ್ಧಶ್ರೀ ಪ್ರಶಸ್ತಿ ಪ್ರದಾನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕರ್ನಾಟಕ ರತ್ನ ಪುನೀತ್`ಗೆ ಸಿದ್ಧಶ್ರೀ ಪ್ರಶಸ್ತಿ ಪ್ರದಾನ
Puneeth Rajkumar

ಪುನೀತ್ ರಾಜ್‍ಕುಮಾರ್ ಅವರಿಗೆ ಕಲಬುರ್ಗಿಯ ಜಿಡಗಾ ಮಠ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಪುನೀತ್ ಅವರ ಅಗಲಿಕೆಗೂ ಮೊದಲೇ ನಿರ್ಧರಿಸಲಾಗಿತ್ತು. ಸ್ವತಃ ಪುನೀತ್ ಈ ಪ್ರಶಸ್ತಿ ಸ್ವೀಕರಿಸಬೇಕಿತ್ತು. ದುರದೃಷ್ಟವಶಾತ್ ಮರಣೋತ್ತರವಾಗಿ ನೀಡುವ ಪರಿಸ್ಥಿತಿ ಬಂತು ಎಂದು ಮಠದ ಶ್ರೀಗಳಾದ ಷಡಕ್ಷರಿ ಡಾ.ಮುರುಘರಾಜೇಂದ್ರ ಸ್ವಾಮಿಗಳು ನೋವು ತೋಡಿಕೊಂಡರು.

ಪುನೀತ್ ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸಲು ರಾಜ್ ಕುಟುಂಬದವರು ಬರಬೇಕಿತ್ತು. ಆದರೆ ಅಶ್ವಿನಿ ಅವರಾಗಲೀ, ಶಿವಣ್ಣ ಅಥವಾ ರಾಘಣ್ಣ ಆಗಲಿ ಬಂದಿರಲಿಲ್ಲ. ಆನ್‍ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದ ರಾಘವೇಂದ್ರ ರಾಜ್‍ಕುಮಾರ್ ಪುನೀತ್‍ಗೆ ನೀಡಿದ ಈ ಪ್ರಶಸ್ತಿಯನ್ನು ನಿಮ್ಮ ಪಾದಗಳಿಗೇ ಅರ್ಪಿಸುತ್ತೇನೆ. ಅನಿವಾರ್ಯ ಕಾರಣಗಳಿಂದ ನಾವ್ಯಾರೂ ಬರಲು ಸಾಧ್ಯವಾಗಲಿಲ್ಲ. ಕ್ಷಮಿಸಿ. ಕುಟುಂಬದ ಮೇಲೆ ಶ್ರೀಮಠದ ಆಶೀರ್ವಾದ ಹೀಗೆಯೇ ಇರಲಿ ಎಂದು ಪ್ರಾರ್ಥಿಸಿದರು.