ಪುನೀತ್ ರಾಜ್‍ಕುಮಾರ್ ಅವರ ಕನಸಿನ ಚಿತ್ರಗಳಲ್ಲೊಂದು ವೈಲ್ಡ್ ಡಾಕ್ಯುಮೆಂಟರಿ. ಕರುನಾಡಿನ ಬಗ್ಗೆ ವಿಶೇಷ ಮಾಹಿತಿ ಒಳಗೊಂಡ ಡಾಕ್ಯುಮೆಂಟರಿ ತಯಾರಿಸುವ ಯೋಜನೆಯಲ್ಲಿ ಕರ್ನಾಟಕದ ವೈಲ್ಡ್ ಲೈಫ್ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದರು ಪುನೀತ್. ಅಮೋಘವರ್ಷ ಅವರ ಕ್ಯಾಮೆರಾ ಕಣ್ಣಲ್ಲಿ ಅರಳಿದ್ದ ಡಾಕ್ಯುಮೆಂಟರಿ ಅದು. ಅಜನೀಶ್ ಲೋಕನಾಥ್ ಸಂಗೀತವಿತ್ತು. ಆ ಟೈಟಲ್‍ನ್ನು ನವೆಂಬರ್ 1ರ ರಾಜ್ಯೋತ್ಸವ ದಿನದಂದು ರಿಲೀಸ್ ಮಾಡುವ ಪ್ಲಾನ್ ಮಾಡಿದ್ದ ಪುನೀತ್, ಅನಿರೀಕ್ಷಿತವಾಗಿ ಅಗಲಿದರು. ಅವರ ಆ ಕನಸನ್ನು ನನಸು ಮಾಡುವ ಹೊಣೆ ಹೊತ್ತು ಹೊರಟಿದ್ದಾರೆ ಅಶ್ವಿನಿ ಪುನೀತ್.
ಡಿಸೆಂಬರ್ 6ರಂದು ಆ ಡಾಕ್ಯುಮೆಂಟರಿಯ ಟೈಟಲ್ ರಿಲೀಸ್ ಆಗುತ್ತಿದೆ. ಡಿಸೆಂಬರ್ 6, ಪಾರ್ವತಮ್ಮ ರಾಜ್‍ಕುಮಾರ್ ಜನ್ಮದಿನ ಎನ್ನುವುದು ಇನ್ನೊಂದು ವಿಶೇಷ.