ಪ್ರಜ್ವಲ್ ದೇವರಾಜ್ ಮತ್ತೊಮ್ಮೆ ಪೊಲೀಸ್ ಆಗುತ್ತಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಂ ನಂತರ ಮತ್ತೊಮ್ಮೆ ಖಾಕಿಧಾರಿಯಾಗುತ್ತಿದ್ದಾರೆ ಪ್ರಜ್ವಲ್. ಪ್ರಜ್ವಲ್ಗೆ ಜೋಡಿಯಾಗಿರೋದು ಬೆಣ್ಣೆ ಬಾಲೆ ಆದಿತಿ ಪ್ರಭುದೇವ. ಲೋಹಿತ್ ನಿರ್ದೇಶನದ ಚಿತ್ರ ಮಾಫಿಯಾ.
ಇದು ಮಾನವ ಕಳ್ಳಸಾಗಾಣಿಕೆ ಕುರಿತ ಥ್ರಿಲ್ಲರ್ ಕಥೆಯಾಗಿದ್ದು, ಚಿತ್ರದಲ್ಲಿ ದೇವರಾಜ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬಿ.ಕುಮಾರ್ ನಿರ್ಮಾಣದ ಸಿನಿಮಾ ಈಗ ಸೆಟ್ಟೇರಿದೆ. ಅನೂಪ್ ಸಿಳೀನ್ ಸಂಗೀತ ನೀಡುತ್ತಿದ್ದಾರೆ. ವೀರಂ ಚಿತ್ರಕ್ಕಾಗಿ ಉದ್ದನೆ ಕೂದಲು ಬಿಟ್ಟಿದ್ದ ಪ್ರಜ್ವಲ್, ಈ ಚಿತ್ರಕ್ಕಾಗಿ ಹೇರ್ ಕಟ್ ಮಾಡಿಸಿದ್ದಾರೆ. ಕಟ್ ಮಾಡಿದ ಕೂದಲನ್ನು ಕ್ಯಾನ್ಸರ್ ಸಂತ್ರಸ್ತರಿಗೆ ನೀಡಿದ್ದಾರೆ.