ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ.. ಏಕ್ ಲವ್ ಯಾ ಚಿತ್ರದ ಈ ಹಾಡು ಈಗ ಎಲ್ಲರ ಹಾಟ್ & ಹಾರ್ಟ್ ಫೇವರಿಟ್. ಗಂಡು ಮಕ್ಕಳಿಗೆ ಬ್ರೇಕಪ್ ಆದಾಗ ಹಾಡೋಕೆ.. ಕುಣಿಯೋಕೆ ಬೇಜಾನ್ ಹಾಡುಗಳಿದ್ದರೂ, ಹೆಣ್ಣು ಮಕ್ಕಳಿಗೆಂದೇ ಒಂದು ಬ್ರೇಕಪ್ ಸಾಂಗ್ ಇರಲಿಲ್ಲ. ಆ ಕೊರತೆಗೆ ಫುಲ್ ಸ್ಟಾಪ್ ಇಟ್ಟಿದೆ ಏಕ್ ಲವ್ ಯಾ ಸಾಂಗ್.
ಈ ಹಾಡು ಹಿಟ್ ಆಗುತ್ತೆ ಅನ್ನೋ ಕಲ್ಪನೆ ಮತ್ತು ನಿರೀಕ್ಷೆ ಎರಡೂ ಇತ್ತು ಅಂತಾರೆ ಹಾಡಿಗೆ ಸಾಹಿತ್ಯ ಬರೆದಿರೋ ಜೋಗಿ ಪ್ರೇಮ್. ಹಾಡಿನ ಸಾಹಿತ್ಯ ಹುಟ್ಟಿದ್ದು ಪಬ್‍ಗಳಲ್ಲಂತೆ. ಪಬ್‍ಗಳಲ್ಲಿ ಬ್ರೇಕಪ್ ಮಾಡಿಕೊಂಡ ಹೆಣ್ಣು ಮಕ್ಕಳು ದಿಸ್ ಗಯ್ ಈಸ್ ಬುಲ್‍ಶಿಟ್ ಯಾ.. ಎಂದು ತಮ್ಮ ತಮ್ಮ ಬಾಯ್‍ಫ್ರೆಂಡ್‍ಗಳ ಬಗ್ಗೆ ಮಾತನಾಡಿಕೊಂಡಿದ್ದು ಕೇಳಿ ಹುಟ್ಟಿದ ಸಾಲುಗಳೇ ಎಣ್ಣೆಗೂ ಹೆಣ್ಣಿಗೂ ಹಾಡಿನ ಸಾಹಿತ್ಯ. ಎಣ್ಣೆಗೂ ಹೆಣ್ಣಿಗೂ.. ಅನ್ನೋ ಪದ ಬಂದೊಡನೆ ಹಾಡು ಹಿಟ್ ಆಗುತ್ತೆ ಎನಿಸಿಬಿಟ್ಟಿತು ಎನ್ನುತ್ತಾರೆ ಪ್ರೇಮ್.
ನಂತರ ಆ ಹಾಡಿಗೆ ಶಕ್ತಿ ತುಂಬಿದ್ದು ಅರ್ಜುನ್ ಜನ್ಯಾ ಮತ್ತು ಮಂಗ್ಲಿ. ಹಾಡಿನಲ್ಲಿ ಹೆಜ್ಜೆ ಹಾಕಿರೋದು ರಾಣಾ ಮತ್ತು ರಚಿತಾ ರಾಮ್. ಹಾಡು ಈಗಾಗಲೇ ಮಿಲಿಯನ್‍ಗಟ್ಟಲೆ ವೀಕ್ಷಣೆ ಕಂಡಿದೆ. ಹೀಗಾಗಿ ಈಗ ಪ್ರೇಮ್ ಎಣ್ಣೆ ಸಾಂಗಿಗೂ ಸಕ್ಸಸ್ಸಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ ಎಂದು ಇನ್ನೊಂದು ಹಾಡು ಬರೆಯಬಹುದು.