` ಆ ರೈಮ್ಸ್ ಹೇಳುತ್ತಿದ್ದಂತೆ ನಡೆಯುತ್ತೆ ಮರ್ಡರ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆ ರೈಮ್ಸ್ ಹೇಳುತ್ತಿದ್ದಂತೆ ನಡೆಯುತ್ತೆ ಮರ್ಡರ್..!
Rhymes Movie Image

ಒಂದು ವಿಶಿಷ್ಟ ರೈಮ್ಸ್ ಇದೆ. ಆ ವಿಶಿಷ್ಟ ರೈಮ್ಸ್ ಹೇಳುತ್ತಿದ್ದಂತೆ ಅಲ್ಲೊಂದು ಕೊಲೆಯಾಗುತ್ತೆ. ಆ ಕೊಲೆಗಳಿಗೂ, ಈ ರೈಮ್ಸ್‍ಗೂ ಏನು ಸಂಬಂಧ? ಇದನ್ನು ರೋಚಕವಾಗಿ ಬಿಡಿಸುವ ಪ್ರಯತ್ನವೇ ರೈಮ್ಸ್. ಇದು ಹೊಸ ಕನ್ನಡ ಸಿನಿಮಾ. ಕಮಲ್‍ಹಾಸನ್ ಅವರ ಜೊತೆ ಕೆಲಸ ಮಾಡಿ ಅನುಭವವಿರುವ ಅಜಿತ್ ಕುಮಾರ್, ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.

ಶುಭಾ ಪೂಂಜಾ ಇಲ್ಲಿ ಆವಂತಿಕಾ ಅನ್ನೋ ಹೆಸರಿನ ಜರ್ನಲಿಸ್ಟ್. ಜರ್ನಲಿಸ್ಟ್ ಪಾತ್ರ ಮಾಡೋದು ಸ್ವಲ್ಪ ಕಷ್ಟಾನೇ. ನನಗೆ ಕೀಬೋರ್ಡ್‍ನಲ್ಲಿ ಟೈಪ್ ಮಾಡಿ ಅಂತಾ ಹೇಳ್ತಿದ್ರು. ಆದರೆ ನಾನು ಕೀಬೋರ್ಡ್ ನುಡಿಸೋ ತರಾ ಮಾಡ್ತಿದ್ದೆ. ನಿರ್ದೇಶಕರು ಅದೆಷ್ಟು ಬಾರಿ ಸೀರಿಯಸ್ಸಾಗಿ ಮಾಡಿ ಮೇಡಂ ಅಂದಿದ್ದಾರೋ ನೆನಪಿಲ್ಲ ಅಂತಾರೆ ಶುಭಾ ಪೂಂಜಾ.

ಜ್ಞಾನಶೇಖರ್, ರವಿಕುಮಾರ್ ಮತ್ತು ರಮೇಶ್ ಚಿತ್ರದ ನಿರ್ಮಾಪಕರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery