` ಆಕ್ಸಿಡೆಂಟ್ : ಹಿರಿಯ ನಟ ಶಿವರಾಮ್ ಸ್ಥಿತಿ ಗಂಭೀರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆಕ್ಸಿಡೆಂಟ್ : ಹಿರಿಯ ನಟ ಶಿವರಾಮ್ ಸ್ಥಿತಿ ಗಂಭೀರ
Senior Actor Shivaram

ಹಿರಿಯ ನಟ, ನಿರ್ಮಾಪಕ ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 3 ದಿನಗಳ ಹಿಂದೆ ಶಿವರಾಮ್ ಅವರಿದ್ದ ಕಾರ್  ಹೊಸಕೆರೆ ಹಳ್ಳಿ  ಬಳಿ ಅಪಘಾತಕ್ಕೀಡಾಗಿತ್ತು. ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಅಪಘಾತವಾಗಿದ್ದರೂ ಅವರು ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಲೇ ಇದ್ದರು. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದ ವೇಳೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ. ಆಸ್ಪತ್ರೆಗೆ ಸೇರಿಸಿದ್ದೇವೆ. ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿದೆ. ವೈದ್ಯರು ಸರ್ಜರಿ ಮಾಡಿಸುವಂತೆ ಹೇಳಿದ್ದಾರೆ. ಆದರೆ ವಯಸ್ಸಾಗಿರುವ ಹಿನ್ನೆಲೆಯಲ್ಲಿಲ ಸರ್ಜರಿ ಮಾಡಿಸಲು ಆಗುತ್ತಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ಅವರ ಪುತ್ರ ರವಿಶಂಕರ್