ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಸುಧಾರಾಣಿ, ನಂತರ ದಶಕಗಳ ಕಾಲ ಚಿತ್ರರಂಗವನ್ನು ನಾಯಕಿಯಾಗಿ ಆಳಿದ್ದು ಇತಿಹಾಸ. ಮನ ಮೆಚ್ಚಿದ ಹುಡುಗಿ.. ಮನೆ ಮನೆಯವರೂ ಮೆಚ್ಚುವ ಹುಡುಗಿಯಾದರು. ಸುಮಾರು 35 ವರ್ಷಗಳಿಂದ ಚಿತ್ರರಂಗದಲ್ಲಿರೋ ಸುಧಾರಾಣಿ ಪಡೆದಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅಂತಹ ಸುಧಾರಾಣಿ ಈಗ ಡಾಕ್ಟರ್ ಸುಧಾರಾಣಿ ಆಗಿದ್ದಾರೆ.
ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯ, ಯುನಿವರ್ಸಲ್ ಡೆವಲಪ್ಮೆಂಟ್ ಸಹಯೋಗದೊಂದಿಗೆ ಕಲಾಕ್ಷೇತ್ರದಲ್ಲಿನ ನನ್ನ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದೆ. ಇದು ನನಗೆ ಗೌರವದ ಹೆಮ್ಮೆಯ ವಿಷಯ. ಇದನ್ನು ನನ್ನ ಕುಟುಂಬವಾದ ನನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳೋಕೆ ಖುಷಿಯಾಗುತ್ತಿದೆ ಎಂದಿದ್ದಾರೆ ಸುಧಾರಾಣಿ.