ರಚ್ಚು ಅಲಿಯಾಸ್ ರಚಿತಾ ರಾಮ್ ಅಲಿಯಾಸ್ ಡಿಂಪಲ್ ಕ್ವೀನ್ ಅಲಿಯಾಸ್ ಬುಲ್‍ಬುಲ್.. ಇಷ್ಟಪಡದೇ ಇರೋರು ಯಾರು? ಅವರನ್ನೀಗ ಲವ್ ಯೂ ರಚ್ಚು ಎಂದು ರಚ್ಚೆ ಹಿಡಿದಿದ್ದಾರೆ ನವೀನ್ ಸಜ್ಜು ಮತ್ತು ಅಜಯ್ ರಾವ್. ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದಾ.. ಅಂತಾ ಬೆನ್ನು ಹತ್ತಿದ್ದಾರೆ.
ಇವರೆಲ್ಲ ರಚ್ಚು ಬೆನ್ನು ಹತ್ತೋಕೆ ಸಾಹಿತ್ಯ ಕೊಟ್ಟವರು ಡೈರೆಕ್ಟರ್ ಚೇತನ್ ಕುಮಾರ್. ಮ್ಯೂಸಿಕ್ ಕೊಟ್ಟವರು ಮಣಿಕಾಂತ್ ಕದ್ರಿ. ಶಶಾಂಕ್ ನಿರ್ದೇಶನದಲ್ಲಿ ರೆಡಿಯಾಗುತ್ತಿರೋ ಲವ್ ಯೂ ರಚ್ಚು ಸಿನಿಮಾದ ಹಾಡಿದು. ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದ ಲವ್ ಯೂ ರಚ್ಚು, ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ.